ಚೆನ್ನೈ: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ಚಿತ್ರದ ರೋಮ್ಯಾಂಟಿಕ್ ದೃಶ್ಯಗಳನ್ನು ತೆಗೆಯಬೇಕು ಎಂದು ನಿರ್ಧರಿಸಲಾಗಿದೆ ಎಂದು ಸಿನಿ ಅಂಗಳದಲ್ಲಿ ಕೇಳಿಬರುತ್ತಿದೆ.
‘ಪುಷ್ಟ’ ಸಿನಿಮಾದಲ್ಲಿ ರೋಮ್ಯಾಂಟಿಕ್ ದೃಶ್ಯಗಳು ಭಾರೀ ವಿವಾದ ಸೃಷ್ಟಿಸುತ್ತಿದ್ದು, ಈ ಸಿನಿಮಾದಲ್ಲಿ ನಾಯಕ, ನಾಯಕಿಯ ಎದೆಯನ್ನು ಮುಟ್ಟುವ ದೃಶ್ಯವಿದೆ. ಅದನ್ನು ನೋಡಿದ ಪ್ರೇಕ್ಷಕರು ಈ ದೃಶ್ಯ ಸಿನಿಮಾಗೆ ಅವಶ್ಯಕತೆ ಇರಲಿಲ್ಲ ಎಂದು ಹೇಳುತ್ತಿದ್ದಾರೆ. ಈ ಪರಿಣಾಮ ಆ ದೃಶ್ಯವನ್ನೇ ಚಿತ್ರದಿಂದ ತೆಗೆಯಬೇಕು ಎಂದು ಚಿತ್ರತಂಡ ನಿರ್ಧರಿಸಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದನ್ನೂ ಓದಿ: 36 ವರ್ಷದ ಕನಸನ್ನ ನನಸು ಮಾಡಿಕೊಂಡ ಕಿಚ್ಚ
Advertisement
Advertisement
‘ಪುಷ್ಪ’ ಡಿಸೆಂಬರ್ 17 ರಂದು ಬಿಡುಗಡೆಯಾಗಿದ್ದು, ಶ್ರೀವಲ್ಲಿ(ರಶ್ಮಿಕಾ ಮಂದಣ್ಣ) ತನ್ನ ಭಾವನೆಗಳನ್ನು ಪುಷ್ಪ ರಾಜ್‍ಗೆ(ಅಲ್ಲು ಅರ್ಜುನ್) ತಿಳಿಸಲು ಬಂದಾಗ ಆತ ಸಾರ್ವಜನಿಕ ಸ್ಥಳದಲ್ಲಿಯೇ ಆಕೆಯ ಎದೆಯನ್ನು ಸ್ಪರ್ಶಿಸುತ್ತಿರುವ ದೃಶ್ಯವನ್ನು ಚಿತ್ರಿಸಲಾಗಿದೆ. ಈ ದೃಶ್ಯ ತೆಲುಗು ಪ್ರೇಕ್ಷಕರಿಗೆ ಇಷ್ಟವಾಗದ ಕಾರಣ ಎಲ್ಲರು ದೂರುತ್ತಿದ್ದಾರೆ.
Advertisement
Advertisement
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಫುಲ್ ಚರ್ಚೆಯಾಗುತ್ತಿದ್ದು, ಪುಷ್ಪ ತಯಾರಕರು ಸ್ವಲ್ಪಮಟ್ಟಿಗೆ ಈ ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು ಕೇಳಿಕೊಂಡಿದ್ದಾರೆ. ಅಭಿಮಾನಿಗಳ ಬೇಡಿಕೆಯ ಮೇರೆಗೆ ‘ಪುಷ್ಪ: ದಿ ರೈಸ್’ ದೃಶ್ಯಕ್ಕೆ ಕೊಡಲಿ ಏಟು ಬಿದ್ದಿದೆ. ತಯಾರಕರು ಈ ದೃಶ್ಯವನ್ನು ಕತ್ತರಿಸಲಿದ್ದಾರೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ. ಇದನ್ನೂ ಓದಿ: ಮತ್ತೊಮ್ಮೆ ನಾವು ಕ್ಯೂಟ್ ಜೋಡಿಗಳು ಎಂದು ತೋರಿಸಿಕೊಟ್ಟ ಯಶ್, ರಾಧಿಕಾ
ಸಿನಿಮಾದ ದೃಶ್ಯಗಳನ್ನು ಟ್ರಿಮ್ ಮಾಡಿ ಸೋಮವಾರದಿಂದ ಪ್ರೇಕ್ಷಕರ ಮುಂದೆ ಬರಲು ಇದು ಸಿದ್ಧವಾಗುತ್ತೆ ಎಂದು ತಿಳಿಸಲಾಗಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಜೋಡಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗುತ್ತಿದೆ.