ಬೆಂಗಳೂರು: ಪುಷ್ಪ ಸಿನಿಮಾ ಮಾದರಿಯಲ್ಲಿ ಖತರ್ನಾಕ್ ಗ್ಯಾಂಗ್ ರಕ್ತಚಂದನ ಸಾಗಾಟ ನಡೆಸುತ್ತಿದ್ದ ವೇಳೆ ಅರಣ್ಯ ಇಲಾಖೆಯ ಶ್ವಾನವೊಂದು ಅವರ ಇಡೀ ಪ್ಲ್ಯಾನ್‍ನ್ನು ತಲೆಕೆಳಗೆ ಮಾಡಿಬಿಟ್ಟಿದೆ.
ಪುಷ್ಪ ಸಿನಿಮಾದ ರಕ್ತಚಂದನದ ಕಳ್ಳತನದ ಸೀನ್ ಅನ್ನು ಈಗ ನಕಲು ಮಾಡಿಕೊಂಡು ಖತರ್ನಾಕ್ ಗ್ಯಾಂಗ್‍ಗಳು ಕಳ್ಳತನ ಮಾಡಲಾರಂಭಿಸಿದೆ. ಈಗ ಅಂಥದ್ದೇ ಗ್ಯಾಂಗ್‍ನಿಂದ 28 ಲಕ್ಷ ಮೌಲ್ಯದ ರಕ್ತಚಂದನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ಬೆಂಗಳೂರು ಗ್ರಾಮಾಂತರದ ಕಟ್ಟಿಗೇನಹಳ್ಳಿಯಲ್ಲಿ ತರಕಾರಿ ಕ್ರೇಟ್ ಹಾಕಿ ಕೆಳಭಾಗದಲ್ಲಿ ರಕ್ತಚಂದನ ಹಾಕಿ ಸಾಗಾಟ ಮಾಡುತ್ತಿದ್ದ ಗ್ಯಾಂಗ್‍ನ್ನು ಅರಣ್ಯ ಇಲಾಖೆಯ ಗಾರ್ಡ್ ಮಲ್ಲಿಕಾರ್ಜುನ್ ಚೇಸ್ ಮಾಡಿದ್ದಾರೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ
ಅವರ ಜೊತೆ ಇದ್ದ ಇಲಾಖೆ ಶ್ವಾನ ಸೀಸರ್ ಅಲಿಯಾಸ್ ಸ್ವೀಟಿ ಕೂಡ ಈ ಕಳ್ಳರನ್ನು ಚೇಸ್ ಮಾಡಿದೆ. ಗಾಬರಿಯಾಗಿ ಅಡ್ಡಾದಿಡ್ಡಿ ಗಾಡಿ ಚಲಾಯಿಸಿದ ಕಳ್ಳರು, ಬಯಲಿನಲ್ಲಿ ಗಾಡಿ ನಿಲ್ಲಿಸಿ ಗಾಡಿ ಲಾಕ್ ಮಾಡಿ ಕೀ ಸಮೇತ ಪರಾರಿಯಾಗಿದ್ದಾರೆ. ಸದ್ಯ 28 ಲಕ್ಷ ಮೌಲ್ಯದ 497 ಕೆಜಿ ರಕ್ತಚಂದನ ಮರದ ತುಂಡು, 61 ಕೆಜಿ ಚಿಕ್ಕ ಚಕ್ಕೆಯನ್ನು ಜಪ್ತಿಮಾಡಿದ್ದಾರೆ. ಅರಣ್ಯ ಇಲಾಖೆಯ ಹಿರಿಯ ಡಿಸಿಎಫ್ ಗಂಗಾಧರ್, ಸಿಬ್ಬಂದಿಯ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ
ಸದ್ಯ ಕಮ್ಮಗೊಂಡನಹಳ್ಳಿಯಲ್ಲಿ ರಕ್ತಚಂದನ ಇಡಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಬಲೆಬೀಸಲಾಗಿದೆ.