ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ನಾನ್ಯಾಕೆ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ದೂರವಿದ್ದೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ಇತ್ತೀಚೆಗೆ ನನಗೆ ಸಣ್ಣದಾಗಿ ಅಪಘಾತವಾಗಿತ್ತು. ಈಗ ನಾನು ಚೇತರಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಜೀವನ ತುಂಬಾ ಕ್ಷಣಿಕ. ನಾಳೆ ಇರುತ್ತೇವೋ, ಇಲ್ಲವೋ ಗೊತ್ತಿಲ್ಲ ಎಂದು ಅಪಘಾತದ ಬೆನ್ನಲ್ಲೇ ನಟಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಶುಭಾ ಪೂಂಜಾಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ರಾ?: ನಟಿ ಹೇಳೋದೇನು?

View this post on Instagram
ನಾನು ಈಗ ಚೇತರಿಸಿಕೊಂಡಿದ್ದೇನೆ ಮತ್ತು ನನ್ನ ಎಂದಿನ ಚಟುವಟಿಕೆಗಳನ್ನು ಮಾಡಲು ಇನ್ನಷ್ಟು ಸೂಪರ್ ಆ್ಯಕ್ಟೀವ್ ಆಗುವ ಹಂತದಲ್ಲಿದ್ದೇನೆ. ನಿಮ್ಮ ಬಗ್ಗೆ ಕಾಳಜಿ ವಹಿಸಲು ಯಾವಾಗಲೂ ಆದ್ಯತೆ ನೀಡಿ. ಯಾಕೆಂದರೆ, ಜೀವನ ತುಂಬ ಚಿಕ್ಕದು. ನಮಗೆ ನಾಳೆ ಅನ್ನೊದು ಇದೆಯೋ, ಇಲ್ಲವೋ ಎಂಬುದೇ ತಿಳಿದಿಲ್ಲ. ಆದ್ದರಿಂದ ಪ್ರತಿದಿನವು ಸಂತೋಷವಾಗಿರಿ ಎಂದು ರಶ್ಮಿಕಾ ಸಲಹೆ ನೀಡಿದ್ದಾರೆ. ಮತ್ತೊಂದು ಅಪ್ಡೇಟ್, ನಾನು ಈಗ ಲಡ್ಡುಗಳನ್ನು ತಿನ್ನುತ್ತಿದ್ದೇನೆ ಎಂದು ಪೋಸ್ಟ್ ಹಾಕಿದ್ದಾರೆ. ಆದರೆ ರಶ್ಮಿಕಾ ಎಲ್ಲಿಯೂ ಕೂಡ ತಮಗೆ ಏನಾಗಿತ್ತು? ಯಾವ ರೀತಿ ಸಮಸ್ಯೆಗಳನ್ನು ಎದುರಿಸಿದ್ದರು ಎಂದು ಹೇಳಿಲ್ಲ.
ಅಂದಹಾಗೆ, ರಶ್ಮಿಕಾಗೆ ಸೌತ್ ಮತ್ತು ಬಾಲಿವುಡ್‌ನಲ್ಲಿ ಭಾರೀ ಬೇಡಿಕೆಯಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪುಷ್ಪ 2, ಛಾವಾ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಜೊತೆಗೆ ಕುಬೇರ, ಸಿಖಂದರ್, ದಿ ಗರ್ಲ್‌ಫ್ರೆಂಡ್, ರೈನ್‌ಬೋ ಸಿನಿಮಾಗಳ ಕೆಲಸ ನಡೆಯುತ್ತವೆ.

