ಕೂರ್ಗ್ ಬ್ಯೂಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಸಿನಿಮಾರಂಗದಲ್ಲಿ ಹೆಚ್ಚಿನ ಬೇಡಿಕೆಯಿದೆ. ಸೌತ್, ಬಾಲಿವುಡ್‌ನಿಂದ ಬಂಪರ್ ಸಿನಿಮಾ ಆಫರ್ಸ್ ಅರಸಿ ಬರುತ್ತಿವೆ. ಇದೀಗ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೆ ರಶ್ಮಿಕಾಗೂ ಆಹ್ವಾನ ನೀಡಿದ್ದು, ಪುಷ್ಪ ನಟಿ ಹಾಜರಿ ಹಾಕಿದ್ದಾರೆ. ಈ ವೇಳೆ ದೀಪಿಕಾ ಪಡುಕೋಣೆ (Deepika Padukone) ಮುಂದೆಯೇ ರಣ್‌ವೀರ್‌ನನ್ನ ತಬ್ಬಿಕೊಂಡಿದ್ದಾರೆ. ನಟನ ಕೆನ್ನೆಗೆ ಪುಷ್ಪ ನಟಿ ಕೆನ್ನೆ ತಾಗಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಲೈಟ್ ಬಣ್ಣದ ಸೀರೆಯುಟ್ಟು ಕಾರ್ಯಕ್ರಮಕ್ಕೆ ರಶ್ಮಿಕಾ ಭಾಗವಹಿಸಿದ್ದಾರೆ. ಈ ವೇಳೆ ರಶ್ಮಿಕಾ ಮುಂದೆಯೇ ದೀಪಿಕಾ- ರಣ್‌ವೀರ್ ದಂಪತಿ ಎದುರಾಗಿದ್ದು, ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಬಳಿಕ ದೀಪಿಕಾ ಮುಂದೆಯೇ ರಣ್‌ವೀರ್‌ನನ್ನ(Ranveer Singh) ತಬ್ಬಿ, ಕೆನ್ನೆಗೆ ಕೆನ್ನೆ ತಾಗಿಸಿ ನಟಿ ಮಾತನಾಡಿಸಿದ್ದಾರೆ. ಬೈ ಹೇಳಿ ಮುಂದಕ್ಕೆ ಹೋಗಿದ್ದಾರೆ. ಇದನ್ನೂ ಓದಿ:ವೈಟ್ ಡ್ರೆಸ್‌ನಲ್ಲಿ ಅಪ್ಸರೆಯಂತೆ ಮಿಂಚಿದ ‘ಕಾಂತಾರ’ ಬ್ಯೂಟಿ
ಕೆಲವರು ಈ ವಿಡಿಯೋ ನೋಡಿ, ಬಾಲಿವುಡ್‌ನಲ್ಲಿ ಇದೆಲ್ಲಾ ಕಾಮನ್ ಅಂದ್ರೆ, ಇನ್ನೂ ಕೆಲವರು ಪತ್ನಿ ದೀಪಿಕಾ ಮುಂದೆಯೇ ರಣ್‌ವೀರ್‌ಗೆ ರಶ್ಮಿಕಾ ಕೆನ್ನೆಗೆ ಕೆನ್ನೆ ತಾಗಿಸಿದ್ದು ಸರಿನಾ? ಎಂದಿದ್ದಾರೆ.
ಮುಕೇಶ್ ಅಂಬಾನಿ ಮನೆಯ ಗಣೇಶ ಚತುರ್ಥಿ ಸಮಾರಂಭದಲ್ಲಿ ಆಲಿಯಾ ಭಟ್, ವರುಣ್ ಧವನ್, ಶಾರುಖ್ ಖಾನ್ ಫ್ಯಾಮಿಲಿ, ನಯನತಾರಾ ದಂಪತಿ, ರೇಖಾ, ಐಶ್ವರ್ಯ ರೈ, ಸಾರಾ ಅಲಿ ಖಾನ್, ಅನನ್ಯಾ ಪಾಂಡೆ, ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ, ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದರು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]