ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಸೌತ್‌ನಲ್ಲಿ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಬಾಲಿವುಡ್‌ನಲ್ಲೂ ರಶ್ಮಿಕಾ ಹಂಗಾಮ ಜೋರಾಗಿದೆ. ಹೀಗಿರುವಾಗ ಇದೀಗ ನಟಿ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟು 8 ವರ್ಷಗಳು ಕಳೆದಿವೆ. ಇದೇ ಖುಷಿಯಲ್ಲಿ ಅಭಿಮಾನಿಗಳಿಗೆ ವಿಶೇಷ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ನಟಿಯ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸಮುದ್ರ ಕಿನಾರೆಯ ಸುಂದರ ಫೋಟೋ ಶೇರ್ ಮಾಡಿ, ಚಿತ್ರರಂಗಕ್ಕೆ ಕಾಲಿಟ್ಟು 8 ವರ್ಷಗಳು ಪೂರೈಸಿವೆ ಮತ್ತು ನಾನು ಇಲ್ಲಿಯವರೆಗೆ ಏನನ್ನು ಮಾಡಿದ್ದೇನೋ ಅದನ್ನು ಮಾಡಲು ಏಕೈಕ ಕಾರಣವೆಂದರೆ ಅದು ನಿಮ್ಮ ಪ್ರೀತಿ ಮತ್ತು ಬೆಂಬಲ. ಧನ್ಯವಾದಗಳು ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಇದನ್ನೂ ಓದಿ:ಸ್ವಿಮ್ ಸೂಟ್ ಧರಿಸಿ ಹಾಟ್ ಅವತಾರ ತಾಳಿದ ಚೈತ್ರಾ ಆಚಾರ್
‘ಕಿರಿಕ್ ಪಾರ್ಟಿ’ (Kirik Party) ಸಿನಿಮಾದ ಮೂಲಕ ರಶ್ಮಿಕಾ ಅವರ ಬಣ್ಣದ ಬದುಕು ಶುರುವಾಯ್ತು. ಈ 8 ವರ್ಷದ ಕೆರಿಯರ್‌ನಲ್ಲಿ 16 ಸೂಪರ್ ಹಿಟ್ ಚಿತ್ರಗಳನ್ನು ನಟಿ ಕೊಟ್ಟಿದ್ದಾರೆ. ನಟರ ಪಾಲಿಗೆ ಶ್ರೀವಲ್ಲಿ ಲಕ್ಕಿ ನಟಿ ಎಂದೇ ಕರೆಯಲಾಗಿದೆ. ಇನ್ನೂ ‘ಅನಿಮಲ್’ ಹಾಗೂ ‘ಪುಷ್ಪ 2’ (Pushpa 2) ಸಿನಿಮಾದ ಸಕ್ಸಸ್ ನಂತರ ರಶ್ಮಿಕಾ ಮಂದಣ್ಣಗೆ ಬೇಡಿಕೆ ಹೆಚ್ಚಾಗಿದೆ.
ಅಂದಹಾಗೆ, ಆಯುಷ್ಮಾನ್ ಜೊತೆಗಿನ ಸಿನಿಮಾ, ರೈನ್‌ಬೋ, ದಿ ಗರ್ಲ್‌ಫ್ರೆಂಡ್, ಅನಿಮಲ್ 2, ಶಾಹಿದ್ ಕಪೂರ್ ಜೊತೆಗಿನ ಸಿನಿಮಾ ಸೇರಿದಂತೆ ಹಲವು ಚಿತ್ರಗಳಿವೆ.