ಕೂರ್ಗ್ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಇದೇ ಡಿ.5ಕ್ಕೆ ರಿಲೀಸ್‌ಗೆ ಸಜ್ಜಾಗಿದೆ. ಇದರ ನಡುವೆ ‘ಪುಷ್ಪ 2’ ಚಿತ್ರದಲ್ಲಿನ ಶ್ರೀವಲ್ಲಿ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ್ದಾರೆ. ಭಾವುಕವಾಗಿ ಸಿನಿಮಾದ ಕುರಿತು ನಟಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಕೇಸ್; ನಟನ ಕುರಿತು ಹಾಡು ಬರೆದಿದ್ದ ರಾಯಚೂರಿನ ಯುವಕ ಬಂಧನ
ಈ ಸಿನಿಮಾದಲ್ಲಿದ್ದ ತನ್ನ ಪಾತ್ರದ ಡಬ್ಬಿಂಗ್ ಮುಗಿಸಿದ್ದೇನೆ ಸ್ವತಃ ರಶ್ಮಿಕಾ ತಿಳಿಸಿದ್ದಾರೆ. ತಮ್ಮ ಡಬ್ಬಿಂಗ್ ಫೋಟೋಗಳನ್ನು ಶೇರ್ ಮಾಡಿ, ಮೋಜು, ಮಸ್ತಿ ಮುಗಿದಿದೆ. ನಾನು ಡಬ್ಬಿಂಗ್ ಕೆಲಸದಲ್ಲಿ ನಿರತಳಾಗಿದ್ದೇನೆ. ‘ಪುಷ್ಪ ದಿ ರೂಲ್’ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಮೊದಲಿನ ಡಬ್ಬಿಂಗ್ ಕೆಲಸವನ್ನೂ ಮುಗಿಸಿದ್ದೇನೆ. ಈಗ ದ್ವಿತೀಯಾರ್ಧಕ್ಕೆ ಡಬ್ಬಿಂಗ್ ಮಾಡುತ್ತಿದ್ದೇನೆ. ಮೊದಲ ಭಾಗ ಅದ್ಭುತವಾಗಿದೆ ಎಂದಿದ್ದಾರೆ.
ದ್ವಿತೀಯಾರ್ಧವು ಅದಕ್ಕಿಂತ ಹೆಚ್ಚಾಗಿರುತ್ತದೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಮನಸ್ಸಿಗೆ ಮುದ ನೀಡುವ ಅನುಭವ ಇದು, ನಿಮಗೆ ಖಂಡಿತ ಸಿಗುತ್ತದೆ. ಈ ಚಿತ್ರವನ್ನು ನಿಮಗೆ ತೋರಿಸಲು ಕಾಯ್ತಿದ್ದೇನೆ. ‘ಪುಷ್ಪ 2’ ಚಿತ್ರೀಕರಣ ಮುಗಿದಿರುವುದಕ್ಕೆ ಬೇಸರವಾಗಿದೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ಇನ್ನೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ಗೆ (Allu Arjun) ರಶ್ಮಿಕಾ ನಾಯಕಿಯಾಗಿ ನಟಿಸಿದ್ದಾರೆ. ಇವರ ಜೊತೆ ಡಾಲಿ ಧನಂಜಯ, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರದಲ್ಲಿ ಐಟಂ ಹಾಡಿಗೆ ಅಲ್ಲು ಅರ್ಜುನ್ ಜೊತೆ ಶ್ರೀಲೀಲಾ (Sreeleela) ಸೊಂಟ ಬಳುಕಿಸಿದ್ದಾರೆ. ಈ ಚಿತ್ರಕ್ಕೆ ಸುಕುಮಾರ್ ನಿರ್ದೇಶನ ಮಾಡಿದ್ದಾರೆ.