Pushpa 2: ಶ್ರೀವಲ್ಲಿ ಪಾತ್ರದ ಬಗ್ಗೆ ಗುಟ್ಟು ಬಿಟ್ಟು ಕೊಟ್ಟ ಕೊಡಗಿನ ಬೆಡಗಿ

Public TV
1 Min Read
rashmika mandanna 3

ನ್ನಡದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಪುಷ್ಪ ಮತ್ತು ಅನಿಮಲ್ ಸಕ್ಸಸ್ ನಂತರ ಭಾರೀ ಬೇಡಿಕೆಯಲ್ಲಿದ್ದಾರೆ. ಪುಷ್ಪ (Pushpa) ಸಿನಿಮಾವಂತೂ ನಟಿಗೆ ಬಿಗ್ ಬ್ರೇಕ್ ಕೊಡ್ತು. ಈಗ ಪುಷ್ಪ 2ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಶ್ರೀವಲ್ಲಿ ಪಾತ್ರ, ಕಥೆ ಬಗ್ಗೆ ಅಪ್‌ಡೇಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Rashmika Mandanna

‘ಪುಷ್ಪ 2’ (Pushpa 2) ಸಿನಿಮಾ ಬಗ್ಗೆ ಮಾತನಾಡಿದ ರಶ್ಮಿಕಾ, ಚಿತ್ರವನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ. ನಾವೀಗ ಅರ್ಧ ದಾರಿಯನ್ನು ದಾಟಿದ್ದೇವೆ. ನಾವು ಒಂದು ಅದ್ಭುತವಾದ ಹಾಡಿನ ಸೀಕ್ವೆನ್ಸ್ ಅನ್ನು ಚಿತ್ರೀಕರಿಸಿದ್ದೇವೆ ಎಂದಿದ್ದಾರೆ ಎಂದು ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ.

RASHMIKA MANDANNA 3

ಜಪಾನ್‌ನಲ್ಲಿ ಚಿತ್ರ ಬಿಡುಗಡೆಯಾಗಬಹುದು ಎಂದು ರಶ್ಮಿಕಾ ಸುಳಿವು ನೀಡಿದ್ದಾರೆ. ತಮ್ಮ ಶ್ರೀವಲ್ಲಿ ಪಾತ್ರದ ಬಗ್ಗೆ ಮಾತನಾಡಿದ ರಶ್ಮಿಕಾ, ನನ್ನ ಪಾತ್ರದಲ್ಲಿ ಬಹುಮುಖ್ಯ ಬದಲಾವಣೆ ಆಗಲಿದೆ. ಪಾರ್ಟ್ 2ನಲ್ಲಿ ನಾನು ಹೆಂಡತಿಯಾಗಿ ಕೆಲವು ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ ಎಂದಿದ್ದಾರೆ. ಪಾರ್ಟ್ 1ಗಿಂತ ಭಾಗ 2ರಲ್ಲಿ ತನ್ನ ಪಾತ್ರ ಕೊಂಚ ಭಿನ್ನವಾಗಿರಲಿದೆ ಎಂದಿದ್ದಾರೆ. ಇದನ್ನೂ ಓದಿ:ಹೊಸಪೇಟೆಯಲ್ಲಿ ‘ಯುವ’ ಚಿತ್ರದ 2ನೇ ಸಾಂಗ್ ರಿಲೀಸ್

ಸುಕುಮಾರ್ ನಿರ್ದೇಶನದ ಪುಷ್ಪ 2ನಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್, ಡಾಲಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಆಗಸ್ಟ್ 15ಕ್ಕೆ ಬಹುಭಾಷೆಗಳಲ್ಲಿ ‘ಪುಷ್ಪ 2’ ರಿಲೀಸ್ ಆಗಲಿದೆ.

Share This Article