ಕೇವಲ ಟಾಲಿವುಡ್ ಮಾತ್ರವಲ್ಲ, ಇಡೀ ಭಾರತ ಚಿತ್ರರಂಗವೇ ಪುಷ್ಪ-2 (Pushpa 2) ಚಿತ್ರ ರಿಲೀಸ್ ಆಗುವ ದಿನಕ್ಕಾಗಿ ತುದಿಗಾಲಲ್ಲಿ ನಿಂತಿದೆ.
ಪುಷ್ಪ ಮೊದಲ ಭಾಗದ ಯಶಸ್ಸಿನ ಬಳಿಕ ಈ ಸಿನಿಮಾ ಮೇಲೆ ಎಲ್ಲರಿಗೂ ಎಲ್ಲಿಲ್ಲದ ಕುತೂಹಲ ಹುಟ್ಟಿದೆ. ಪುಷ್ಪರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್ ಖದರ್ ಲುಕ್‌ಗಳು ಈಗಾಗಲೇ ಅಭಿಮಾನಿಗಳಲ್ಲಿ ಕ್ರೇಸ್ ಹೆಚ್ಚಿಸಿದೆ. ಇದೀಗ ʻಪುಷ್ಪ 2; ದಿ ರೂಲ್ʼ ಚಿತ್ರದ ಟ್ರೇಲರ್ (Pushpa 2 The Rule Trailer) ಬಿಡುಗಡೆ ಆಗಿದ್ದು, ಸಿನಿಮಾ ಮೇಲಿನ ಕುತೂಹಲಕ್ಕೆ ಮತ್ತಷ್ಟು ಒಗ್ಗರಣೆ ಹಾಕಿದಂತಿದೆ ಟ್ರೇಲರ್.
ಇಂದು ಬಿಡುಗಡೆಯಾದ ಟ್ರೈಲರ್‌ನಲ್ಲಿ ಅಲ್ಲು ಅರ್ಜುನ್ (Allu Arjun) ಜೊತೆಗೆ ಫಹಾದ್ ಫಾಸಿಲ್ ಖದರ್ (Fahadh Faasil) ಲುಕ್‌ನಲ್ಲಿ ಕಾಣಿಸಿಕೊಂಡರೆ, ರಶ್ಮೀಕಾ ಮಂದಣ್ಣ ಕೂಡ ಶೈನ್ ಆಗಿದ್ದಾರೆ. ಇದನ್ನೂ ಓದಿ: ಅಲ್ಲು ಅರ್ಜುನ್‌ಗೆ ಸ್ಪೆಷಲ್ ಗಿಫ್ಟ್ ಕಳುಹಿಸಿದ ಶ್ರೀಲೀಲಾ
ಕಾಡಾನೆಯ ಜೋರು ಸೌಂಡು, ಯಾರವನು? ಹಣ ಎಂದರೆ ಲೆಕ್ಕಕ್ಕಿಲ್ಲ. ಅಧಿಕಾರ ಅಂದ್ರೆ ಭಯ ಇಲ್ಲ ಎನ್ನುವ ಜಗಪತಿ ಬಾಬು ಡೈಲಾಗ್‌ನೊಂದಿಗೆ ಟ್ರೈಲರ್ ತೆರೆದುಕೊಳ್ಳುತ್ತದೆ. ಅಲ್ಲಿಂದ ಶುರುವಾಗುವ ಟ್ರೈಲರ್ ತನ್ನದೇ ಆದ ದೊಡ್ಡ ಸಾಮ್ರಾಜ್ಯವನ್ನೇ ಸೃಷ್ಟಿಸಿಕೊಂಡ ಪುಷ್ಪರಾಜ್‌ನ ಇನ್ನೊಂದು ಮುಖದ ಅನಾವರಣ ಮಾಡಿದ್ದಾರೆ ನಿರ್ದೇಶಕರು. ಪೊಲೀಸ್ ಇಲಾಖೆ ಮಾತ್ರವಲ್ಲದೆ, ರಾಜಕಾರಣಿಗಳಿಗೂ ಈ ಪುಷ್ಪರಾಜ್ ನಡುಕ ಹುಟ್ಟಿಸಿದ್ದಾನೆ. ಹೇಳಿ ಕೇಳಿ ಅಲ್ಲು ಅರ್ಜುನ್ ಮಾಸ್ ಹೀರೋ. ಆ ಪ್ರಭಾವಳಿಗೆ ತಕ್ಕಂತೆಯೇ ಅವರನ್ನೇ ಟ್ರೇಲರ್‌ನಲ್ಲಿ ಎತ್ತಿ ಮೆರೆಸಲಾಗಿದೆ.
ಪುಷ್ಪರಾಜ್‌ನ ಬಾಲ್ಯದ ಕಹಿ ಅನುಭವಗಳನ್ನು ಸೀಕ್ವೆಲ್‌ನಲ್ಲಿ ಕೊಂಚ ಎಳೆದು ತಂದಿರುವ ನಿರ್ದೇಶಕ ಸುಕುಮಾರ್. ಅದಕ್ಕೆ ತಕ್ಕಂತೆ, ‘ನಾಮ್ ಚೋಟಾ ಹೈ.. ಲೇಕಿನ್ ಸೌಂಡ್ ಬಡಾ ಹೈ’ ಎಂದು ಪುಷ್ಪರಾಜ್ ಹೇಳುವ ಎಲಿವೇಶನ್ ದೃಶ್ಯಗಳೂ ಟ್ರೇಲರ್‌ನಲ್ಲಿವೆ. ಇದೆಲ್ಲದರ ಜತೆಗೆ ಶ್ರೀವಲ್ಲಿ ಜತೆಗಿನ ದೃಶ್ಯಗಳು ಟ್ರೇಲರ್‌ನಲ್ಲಿವೆ. ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಫಹಾದ್ ಫಾಸಿಲ್ ಖದರ್ ಕ್ರೇಜಿಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದಲ್ಲಿದ್ದ ಅದೇ ಗತ್ತು ಎರಡನೇ ಭಾಗದಲ್ಲಿಯೂ ಮುಂದುವರಿದಿದೆ. ಇದನ್ನೂ ಓದಿ: ಸರಳವಾಗಿ ನಡೆಯಿತು ಡಾಲಿ ಧನಂಜಯ್, ಧನ್ಯತಾ ನಿಶ್ಚಿತಾರ್ಥ- ಫೆ.16ಕ್ಕೆ ಮದುವೆ
ಮೊದಲ ಭಾಗಕ್ಕಿಂತ ದೊಡ್ಡ ಕ್ಯಾನ್ವಾಸ್‌ನಲ್ಲಿ ಪುಷ್ಪ 2 ಮೂಡಿಬಂದಿದೆ. ಅದಕ್ಕೆ ತಕ್ಕಂತೆ ಪುಷ್ಪರಾಜ್ ಬಾಯಿಂದ ಡೈಲಾಗ್‌ವೊಂದು ಹೊರಡಿದೆ. “ಈ ಪುಷ್ಪರಾಜ್ ನ್ಯಾಶನಲ್ ಅಲ್ಲ, ಇಂಟರ್‌ನ್ಯಾಶನಲ್” ಎಂದಿದ್ದಾನೆ. ಅಲ್ಲಿಗೆ ಅದೇ ಇಂಟರ್‌ನ್ಯಾಶನಲ್ ಮಟ್ಟದಲ್ಲಿಯೇ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸುಕುಮಾರ್. ಇಡೀ ಟ್ರೇಲರ್‌ನಲ್ಲಿ ಸಾಹಸ ದೃಶ್ಯಗಳು ಮೇಳೈಸಿವೆ. ಮೈಚಳಿ ಬಿಟ್ಟು ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲು ಅರ್ಜುನ್. ಕೊನೆಯಲ್ಲಿ ಅಲ್ಲು ಅರ್ಜುನ್ ಬೆಂಬಲಿಗರು ʻಪುಷ್ಪ ಅಂದ್ರೆ ಫ್ಲವರ್ ಅನ್ಕೊಂಡ್ರಾʼ ಎನ್ನುತ್ತಾರೆ? ಅದಕ್ಕೆ ಗನ್ ಸೌಂಡಿನೊಂದಿಗೆ ಫೈಯರ್ ಅಲ್ವಾ? ಎನ್ನುತ್ತಾರೆ ಫಾಸಿಲ್, ಅದಕ್ಕೆ ಪುಷ್ಪಾ ಬೆಂಬಲಿಗರು ʻಅಲ್ಲ ಅಲ್ಲ ಎನ್ನುತ್ತಿದ್ದಂತೆ ಅಲ್ಲು ಅರ್ಜುನ್ ವೈಲ್ಡ್ ಫೈಯರ್ʼ ಎನ್ನುವುದರೊಂದಿಗೆ ಟ್ರೈಲರ್ ಕೊನೆಗೊಳ್ಳುತ್ತದೆ.
ಇಡೀ ಭಾರತವೇ ಎದುರು ನೋಡುತ್ತಿರುವ ʻಪುಷ್ಪ-2; ದಿರೂಲ್ʼ ಖದರ್ ಟ್ರೈಲ್‌ನೊಂದಿಗೆ ಭಾರಿ ಕುತೂಹಲ ಹೆಚ್ಚಿಸಿದೆ. ಸಿನಿಮಾ ಹೇಗೆ ಸೌಂಡು ಮಾಡುತ್ತದೆ ಎಂಬುದನ್ನ ಕಾಡುನೋಡ್ಬೇಕಿದೆ. ಇದನ್ನೂ ಓದಿ: ಗುಡ್ನ್ಯೂಸ್ – ʻಕಾಂತಾರ ಚಾಪ್ಟರ್-1ʼ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್