ತೆಲುಗು ಚಿತ್ರೋದ್ಯಮದಲ್ಲಿ ಸಂಚಲನ ಸೃಷ್ಟಿಸಿದ ‘ಪುಷ್ಪ 2’ ಟೀಸರ್

Public TV
1 Min Read
pushpa 2 2

ಲ್ಲು ಅರ್ಜುನ್ (Allu Arjun) ಅವರ ಹುಟ್ಟು ಹಬ್ಬ (Birthday)ದ ದಿನದಂದು ಬಿಡುಗಡೆ ಆಗಿರುವ ಪುಷ್ಪ 2 ಸಿನಿಮಾದ ಟೀಸರ್ (Teaser) ತೆಲುಗು ಚಿತ್ರೋದ್ಯಮದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿದೆ. ಟೀಸರ್ ಬಗ್ಗೆ ಪ್ರತಿಯೊಬ್ಬರೂ ಕೊಂಡಾಡುತ್ತಿದ್ದಾರೆ. ಸೊಂಟಕ್ಕೆ ಸೆರೆಗು ಸಿಕ್ಕಿಸಿಕೊಂಡು ಖಳರನ್ನು ಪುಷ್ಪರಾಜ್ ಅಟ್ಟಾಡಿಸಿಕೊಂಡು ಹೊಡೆಯುವ ದೃಶ್ಯವಿದೆ. ಜೊತೆಗೆ ಜಾತ್ರೆಯ ಸಂದರ್ಭದಲ್ಲಿ ಗಂಗಮ್ಮ ವೇಷಧಾರೆಯಾಗಿ ಅಲ್ಲು ಎಂಟ್ರಿ ಕೊಡುವ ಸಖತ್ ದೃಶ್ಯವೂ ಅದಾಗಿದೆ. ಸಾಹಸ ಸನ್ನಿವೇಶವನ್ನು ರೋಚಕವಾಗಿ ಕಟ್ಟಿಕೊಡಲಾಗಿದೆ. ಹಾಗಾಗಿ ಕೋಟ್ಯಂತರ ಜನರು ಟೀಸರ್ ವೀಕ್ಷಿಸಿ ಜೈ ಅಂದಿದ್ದಾರೆ.

Pushpa 2 2

ನಿಂಬೆ ಹಣ್ಣಿನ ಮಾಲೆ, ಕೊರಳಲ್ಲಿ ಹಾರ, ಚಿನ್ನದ ಸರ, ಕಾಲಲ್ಲಿ ಗೆಜ್ಜೆ ಹೀಗೆ ನಾನಾ ಅವತಾರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದಾರೆ. ಅದ್ದೂರಿಯಾಗಿಯೇ ಜಾತ್ರೆ ಸೆಟ್ ಹಾಕಿ ಚಿತ್ರೀಕರಿಸಿದ್ದಾರೆ ಸುಕುಮಾರ್. ಟೀಸರ್ ನಲ್ಲಿ ಕಂಡ ಅಷ್ಟೂ ದೃಶ್ಯವನ್ನು ಜಾತ್ರೆಯ ಸಂದರ್ಭದಲ್ಲೇ ಸೆರೆ ಹಿಡಿಯಲಾಗಿದೆ.

Pushpa 2 1 1

ಈ ಹಿಂದೆ ಪುಷ್ಪ 2 (Pushpa 2) ಸಿನಿಮಾದ ಮತ್ತೊಂದು ಪೋಸ್ಟರ್ (Poster) ರಿಲೀಸ್ ಆಗಿತ್ತು. ತ್ರಿಶೂಲ್ ಅನ್ನು ಪ್ರಮುಖವಾಗಿಟ್ಟುಕೊಂಡು ಪೋಸ್ಟರ್ ಡಿಸೈನ್ ಮಾಡಲಾಗಿತ್ತು. ಅದರಲ್ಲಿ ಹಲವಾರು ರಹಸ್ಯಗಳನ್ನು ಅಡಗಿಸಿಟ್ಟಿದ್ದರು ನಿರ್ದೇಶಕರು. ಕುಂಕುಮ ಹಾಕಿರೋ ತ್ರಿಶೂಲ. ಅದರ ಹಿಂದೆ ಉರಿಯುವ ಕಣ್ಣುಗಳು, ಶಂಖ ಊದುತ್ತಿರುವ ಗೆಸ್ಚರ್ ಒಂದು ರೀತಿಯಲ್ಲಿ ದೈವಾತಾರ ತಾಳಿರೋ ನಾಯಕನ ಪೋಸ್ಟರ್ ಅದಾಗಿತ್ತು.

ಸುಕುಮಾರ್ ನಿರ್ದೇಶನದ ‘ಪುಷ್ಪ 2’ನಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಫಹಾದ್ ಫಾಸಿಲ್, ಕನ್ನಡದ ನಟ ಡಾಲಿ (Daali Dhananjay) ಸೇರಿದಂತೆ ಅನೇಕರು ನಟಿಸಿದ್ದಾರೆ. ಸಿನಿಮಾ ಇದೇ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಬಹುಭಾಷೆಗಳಲ್ಲಿ ತೆರೆ ಕಾಣಲಿದೆ.

Share This Article