ನಿನ್ನೆ ಪುಷ್ಪ 2 ಸಿನಿಮಾದ ಮತ್ತೊಂದು ಪೋಸ್ಟರ್ (Poster) ರಿಲೀಸ್ ಆಗಿದೆ. ತ್ರಿಶೂಲ್ ಅನ್ನು ಪ್ರಮುಖವಾಗಿಟ್ಟುಕೊಂಡು ಪೋಸ್ಟರ್ ಡಿಸೈನ್ ಮಾಡಲಾಗಿದ್ದು, ಅದರಲ್ಲಿ ಹಲವಾರು ರಹಸ್ಯಗಳನ್ನು ಅಡಗಿಸಿಟ್ಟಿದ್ದಾರೆ ನಿರ್ದೇಶಕರು. ಕುಂಕುಮ ಹಾಕಿರೋ ತ್ರಿಶೂಲ. ಅದರ ಹಿಂದೆ ಉರಿಯುವ ಕಣ್ಣುಗಳು, ಶಂಖ ಊದುತ್ತಿರುವ ಗೆಸ್ಚರ್ ಒಂದು ರೀತಿಯಲ್ಲಿ ದೈವಾತಾರ ತಾಳಿರೋ ನಾಯಕನ ಪೋಸ್ಟರ್ ಅದಾಗಿದೆ.
Advertisement
ಅಷ್ಟೇ ಅಲ್ಲ, ‘ಪುಷ್ಪ’ ಸಕ್ಸಸ್ ನಂತರ ಪುಷ್ಪ 2 (Pushpa 2) ಚಿತ್ರದ ಮೇಲೆ ನಿರೀಕ್ಷೆಯಿಟ್ಟ ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಸಿಗದೇ ನಿರಾಶರಾಗಿದ್ದರು. ಅಲ್ಲು ಅರ್ಜುನ್ (Allu Arjun) ಬರ್ತ್‌ಡೇಯಂದು (ಏ.8) ಚಿತ್ರದ ಟೀಸರ್ ಬಿಡುಗಡೆ ಮಾಡುವುದಾಗಿ ಅಧಿಕೃತ ಘೋಷಣೆ ಮಾಡಿದ್ದಾರೆ. ಪುಷ್ಪ ಮಾಸ್ ಜಾತ್ರೆಗೆ ಕೌಂಟ್‌ಡೌನ್ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
Advertisement
Advertisement
ಪುಷ್ಪ ಪಾರ್ಟ್ 2ಗೆ ಪುಷ್ಪ: ದಿ ರೈಸ್ ಎನ್ನುವ ಶೀರ್ಷಿಕೆ ಇಡಲಾಗಿದೆ. ಮೊದಲ ಭಾಗದಲ್ಲಿ ಕೇವಲ ಕಾರ್ಮಿಕನಂತಿದ್ದ ಪುಷ್ಪರಾಜ್ ಈಗ ರಕ್ತಚಂದನದ ಕಳ್ಳಸಾಗಣೆಯಲ್ಲಿ ಆತನೇ ಕಿಂಗ್‌ಪಿನ್ ಆಗಿ ಬೆಳೆದಿರುತ್ತಾನೆ. ಮೊದಲ ಭಾಗದಲ್ಲಿ ವಿದೇಶದ ರೆಫರೆನ್ಸ್ ನೀಡಲಾಗಿತ್ತು. ರಕ್ತಚಂದನ ಜಪಾನ್‌ಗೆ ರಫ್ತಾಗಲಿದೆ ಎಂದು ತೋರಿಸಲಾಗಿತ್ತು. ಈಗ ಎರಡನೇ ಭಾಗದಲ್ಲಿ ಸಿನಿಮಾದ ಒಂದಷ್ಟು ಕಥೆ ವಿದೇಶದಲ್ಲೇ ಸಾಗಲಿದೆ ಎನ್ನಲಾಗಿದೆ.
Advertisement
ಸುಕುಮಾರ್ ನಿರ್ದೇಶನದ ‘ಪುಷ್ಪ 2’ನಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna), ಫಹಾದ್ ಫಾಸಿಲ್, ಕನ್ನಡದ ನಟ ಡಾಲಿ (Daali Dhananjay) ಸೇರಿದಂತೆ ಅನೇಕರು ನಟಿಸಿದ್ದಾರೆ. ಸಿನಿಮಾ ಇದೇ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಬಹುಭಾಷೆಗಳಲ್ಲಿ ತೆರೆ ಕಾಣಲಿದೆ.