ತೆಲುಗು ಸಿನಿಮಾಗಳ ಮೂಲಕ ಸಕ್ಸಸ್‌ಫುಲ್ ಜೋಡಿ ಎನಿಸಿಕೊಂಡಿರುವ ವಿಜಯ್ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ ಬಗ್ಗೆ ಬಿಗ್ ನ್ಯೂಸ್‌ವೊಂದು ಸಿಕ್ಕಿದೆ. ವಿಜಯ್ ಹೊಸ ಸಿನಿಮಾಗೆ ರಶ್ಮಿಕಾ ನಾಯಕಿಯಾಗಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
— Mythri Movie Makers (@MythriOfficial) May 2, 2025
ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ‘ಶ್ಯಾಮ್ ಸಿಂಗ್ ರಾಯ್’ ನಿರ್ದೇಶಕ ರಾಹುಲ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಅವರ ನಿರ್ದೇಶನದಲ್ಲಿ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ನಟಿಸಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಸಿನಿಮಾಗೆ ರಶ್ಮಿಕಾ ನಾಯಕಿ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕೆ ಪೂರಕವೆಂಬಂತೆ ನಿರ್ಮಾಣ ಸಂಸ್ಥೆ ಜೊತೆಗಿನ ರಶ್ಮಿಕಾ ಪೋಸ್ಟ್ ಸದ್ದು ಮಾಡ್ತಿದೆ.
‘ಪುಷ್ಪ 2’ ಸಿನಿಮಾ ಮಾಡಿ ಗೆದ್ದಿರುವ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಮತ್ತೊಮ್ಮೆ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ಸಿನಿಮಾ ಮಾಡುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದೆ. ಹೌದು ನೋಡೋಣ (#Hmmletssee) ಎಂದು ಬರೆದುಕೊಂಡು ರಶ್ಮಿಕಾಗೆ ನಿರ್ಮಾಣ ಸಂಸ್ಥೆ ಟ್ಯಾಗ್ ಮಾಡಿದೆ. ಅದಕ್ಕೆ ನಟಿ, ಹೌದು ಎಂಬಂತೆ (#Hmmletsseeguys) ಎಂದು ರಿಯಾಕ್ಟ್ ಮಾಡಿದ್ದಾರೆ. ಈ ಸಂಭಾಷಣೆ ಫ್ಯಾನ್ಸ್ ತಲೆಗೆ ಹುಳ ಬಿಟ್ಟಂತಾಗಿದೆ. ವಿಜಯ್ ಜೊತೆಗಿನ ನಟಿಯ ಸಿನಿಮಾ ಸುದ್ದಿಗೆ ಪುಷ್ಠಿ ನೀಡಿದಂತಿದೆ. ಎಲ್ಲದ್ದಕ್ಕೂ ಚಿತ್ರತಂಡದ ಕಡೆಯಿಂದ ಅಫಿಷಿಯಲ್ ಅಪ್‌ಡೇಟ್ ಹೊರಬೀಳುವವರೆಗೂ ಕಾದುನೋಡಬೇಕಿದೆ.
ಅಂದಹಾಗೆ, ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್ ಸಿನಿಮಾಗಳಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಜೋಡಿಯಾಗಿ ನಟಿಸಿ ಸಕ್ಸಸ್ ಕಂಡಿದ್ದಾರೆ.