ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾದಲ್ಲಿ ಭಾರೀ ಬೇಡಿಕೆಯಿದೆ. ಸ್ಟಾರ್ ನಟರೊಂದಿಗೆ ನಟಿಸಿರುವ ಶ್ರೀವಲ್ಲಿಗೆ ಈಗ ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕಿದೆ ಎನ್ನಲಾದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಮತ್ತೆ ಸೂಪರ್ ಹೀರೋ ಆಗಿ ತೇಜ್ ಸಜ್ಜಾ ಎಂಟ್ರಿ; ‘ಮಿರಾಯ್’ ಟೀಸರ್ ರಿಲೀಸ್‌ಗೆ ಡೇಟ್ ಫಿಕ್ಸ್
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಜ್ಯೂ.ಎನ್‌ಟಿಆರ್ (Jr NTR) ನಟನೆಯ ಈ ಸಿನಿಮಾದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಈ ಸಿನಿಮಾದಲ್ಲಿ ಸ್ಟಾರ್ ನಟಿಯಿಂದಲೇ ಐಟಂ ಡ್ಯಾನ್ಸ್ ಮಾಡಿಸುವ ಪ್ಲ್ಯಾನ್ ಚಿತ್ರತಂಡಕ್ಕಿದ್ದು, ಅದಕ್ಕಾಗಿ ರಶ್ಮಿಕಾರನ್ನು ಚಿತ್ರತಂಡ ಸಂಪರ್ಕಿಸಿದೆಯಂತೆ. ಜನಪ್ರಿಯತೆಯಿರುವ ಸ್ಟಾರ್ ನಟಿ ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ್ರೆ ಸಿನಿಮಾಗೆ ಪ್ಲಸ್ ಪಾಯಿಂಟ್ ಎಂಬುದು ಚಿತ್ರತಂಡದ ಲೆಕ್ಕಾಚಾರ. ಹೀಗಾಗಿ ಅದಕ್ಕೆ ರಶ್ಮಿಕಾನೇ ಸೂಕ್ತ ಎಂದು ತಂಡಕ್ಕೆ ಅನಿಸಿದೆ.
ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳ ಯಶಸ್ಸು ಕಂಡಿರೋ ರಶ್ಮಿಕಾರನ್ನು ಸಂಪರ್ಕಿಸಿ ಐಟಂ ಡ್ಯಾನ್ಸ್‌ಗೆ ಹೆಜ್ಜೆ ಹಾಕಲು ಕೇಳಲಾಗಿದೆಯಂತೆ. ಒಂದು ಹಂತದ ಮಾತುಕತೆ ಆಗಿದೆ ಎನ್ನಲಾಗ್ತಿದೆ. ಆದರೆ ಜ್ಯೂ.ಎನ್‌ಟಿಆರ್ ಸಿನಿಮಾದ ಭಾಗವಾಗಲು ನಟಿ ಒಪ್ಪಿಕೊಂಡ್ರಾ ಎಂಬುದು ಖಾತ್ರಿಯಾಗಿಲ್ಲ. ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ತಿಳಿಸಬೇಕಿದೆ. ಇದನ್ನೂ ಓದಿ:ಮದುವೆಯಾದ್ಮೇಲೂ ಕೀರ್ತಿ ಸುರೇಶ್‌ಗೆ ಡಿಮ್ಯಾಂಡ್- ಕೈತುಂಬಾ ಸಿನಿಮಾಗಳಲ್ಲಿ ಬ್ಯುಸಿ
ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ರುಕ್ಮಿಣಿ ವಸಂತ್‌ಗೆ ಚಾನ್ಸ್ ಸಿಕ್ಕಿದೆ ಎಂದು ಹೇಳಲಾಗ್ತಿದೆ. ಅವರು ಈ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಸದ್ಯ ಹರಿದಾಡುತ್ತಿರುವ ಸುದ್ದಿ. ಒಂದು ವೇಳೆ, ರಶ್ಮಿಕಾ ಕೂಡ ಈ ಸಿನಿಮಾದ ಭಾಗವಾದ್ರೆ, ಕರ್ನಾಟಕದ ಇಬ್ಬರೂ ನಟಿಯರನ್ನು ಒಂದೇ ಸಿನಿಮಾದಲ್ಲಿ ನೋಡಬಹುದಾಗಿದೆ. ‘ಕೆಜಿಎಫ್ 2’ (KGF 2) ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಡೈರೆಕ್ಷನ್ ಈ ಸಿನಿಮಾಗೆ ಇರೋದ್ರಿಂದ ಈ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.