ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ನಟಿಸಿದ ‘ಸಿಕಂದರ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಮಾಡೋದ್ರಲ್ಲಿ ಸೋತಿದೆ. ಈ ಬೆನ್ನಲ್ಲೇ ಪ್ರಭಾಸ್ ನಟನೆಯ ‘ಸ್ಪಿರಿಟ್’ (Spirit) ಚಿತ್ರದಿಂದ ರಶ್ಮಿಕಾ ಹೊರಬಿದ್ದಿದ್ದಾರೆ ಎನ್ನಲಾದ ಸುದ್ದಿಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಏ.16ರಿಂದ ‘ಬಿಲ್ಲ ರಂಗ ಭಾಷಾ’ ಚಿತ್ರದ ಶೂಟಿಂಗ್ ಆರಂಭ- ಅಪ್‌ಡೇಟ್ ಕೊಟ್ರು ಕಿಚ್ಚ
ಸಲ್ಮಾನ್ ಜೊತೆ ಬ್ಯಾಕ್ ಟು ಬ್ಯಾಕ್ 3 ಸಕ್ಸಸ್‌ಫುಲ್ ಸಿನಿಮಾ ಕೊಟ್ಟು ಗೆದ್ದ ರಶ್ಮಿಕಾ ಮಂದಣ್ಣ ಇದ್ರೂ ಕೂಡ ‘ಸಿಕಂದರ್’ (Sikandar) ಚಿತ್ರ ಗೆಲ್ಲೋದ್ರಲ್ಲಿ ವಿಫಲವಾಯ್ತು. ಈ ಸೋಲಿನ ಕಹಿಯ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ. ಪ್ರಭಾಸ್ (Prabhas) ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ ರಶ್ಮಿಕಾನೇ ನಾಯಕಿ ಎಂಬ ವಿಚಾರ ದಟ್ಟವಾಗಿ ಕೇಳಿ ಬಂದಿತ್ತು. ಸಿಕಂದರ್ ಸೋಲಿನ ಹಿನ್ನೆಲೆ ಚಿತ್ರತಂಡ ಬೇರೆ ನಾಯಕಿಯನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ. ಸದ್ಯ ಈ ಸುದ್ದಿ ಕೇಳಿ ಶ್ರೀವಲ್ಲಿ ಫ್ಯಾನ್ಸ್‌ಗೆ ಬೇಸರದಲ್ಲಿದ್ದಾರೆ. ಇದನ್ನೂ ಓದಿ:ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟಿದ್ದ ರಶ್ಮಿಕಾಗೆ ಶುರುವಾಯ್ತಾ ಬ್ಯಾಡ್ ಟೈಮ್?
‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ‘ಸ್ಪಿರಿಟ್’ ಸಿನಿಮಾ ಇದೇ ಮೇ ರಿಂದ ಶುರುವಾಗಲಿದೆ. ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಮುಂದಿನ ರಿಲೀಸ್‌ಗೆ ತಂಡ ಯೋಜನೆ ಹಾಕಿಕೊಂಡಿದೆ. ದಿ ರಾಜಾ ಸಾಬ್ ಸಿನಿಮಾ ಮುಗಿಸಿ ಸದ್ಯದಲ್ಲೇ ಪ್ರಭಾಸ್ ಸ್ಪಿರಿಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ.