ಬಾಲಿವುಡ್ ಚಿತ್ರಕ್ಕಾಗಿ ಸಂಭಾವನೆ ಇಳಿಸಿಕೊಂಡ್ರಾ ‘ಕಿಸ್ಸಿಕ್’ ಬೆಡಗಿ?

Public TV
1 Min Read
sreeleela 1

ಡ್ಯಾನ್ಸಿಂಗ್ ಕ್ವೀನ್ ಎಂದೇ ಫೇಮಸ್ ಆಗಿರುವ ಶ್ರೀಲೀಲಾ (Sreeleela) ತೆಲುಗು ಚಿತ್ರಗಳ ಜೊತೆ ಬಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ಅವರ ಬಗ್ಗೆ ಹೊಸದೊಂದು ಗುಲ್ಲೆದ್ದಿದೆ. ಬಾಲಿವುಡ್ ಚಿತ್ರಕ್ಕಾಗಿ ತೆಲುಗು ಚಿತ್ರಕ್ಕಿಂತ ಕಮ್ಮಿ ಸಂಭಾವನೆಗೆ ಒಪ್ಪಿಕೊಂಡು ಸಿನಿಮಾ ಮಾಡ್ತಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಹಸೆಮಣೆ ಏರಿದ ‘ಬಿಗ್ ಬಾಸ್’ ಖ್ಯಾತಿಯ ಶಮಂತ್ ಗೌಡ

sreeleela 5ಶ್ರೀಲೀಲಾ ನಟನೆಯ ಸಿನಿಮಾಗಳು ಹಿಟ್ ಆಗಿಲ್ಲದಿದ್ರೂ ಅವರಿಗಿರುವ ಕ್ರೇಜ್ ಕಮ್ಮಿಯಾಗುತ್ತಿಲ್ಲ. ಅದರಲ್ಲೂ ‘ಪುಷ್ಪ 2’ ಬಳಿಕ (Pushpa 2) ಕಿಸ್ಸಿಕ್ ಬೆಡಗಿಗೆ ಬೇಡಿಕೆ ಹೆಚ್ಚಾಗಿದೆ ಎಂದರೆ ತಪ್ಪಿಲ್ಲ. ಇದರ ನಡುವೆ ಬಾಲಿವುಡ್ ಚಿತ್ರಕ್ಕಾಗಿ ನಟಿ ಒಂದು ಕೋಟಿ ಸಂಭಾವನೆ ಕಮ್ಮಿ ಪಡೆದಿದ್ದಾರೆ ಎನ್ನಲಾದ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ತೆಲುಗಿನ ಒಂದು ಸಿನಿಮಾಗೆನೇ 3 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು ಎನ್ನಲಾಗಿದ್ದು, ಈಗ ಬಾಲಿವುಡ್ ‘ಆಶಿಕಿ 3’ಗೆ 2 ಕೋಟಿ ರೂ. ಸಂಭಾವನೆಗೆ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ನಿಮ್ಮದು ಕೋಳಿ ಕಾಲುಗಳು- ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ಅನನ್ಯಾ ಪಾಂಡೆ

sreeleelaತಮಗೆ ಬೇಡಿಕೆ ಇದ್ರೂ ಬಾಲಿವುಡ್ ಸಿನಿಮಾಗಳ ಆಸೆಗೆ 1 ಕೋಟಿ ರೂ. ಸಂಭಾವನೆ ಇಳಿಸಿಕೊಂಡ್ರಾ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇಷ್ಟಕ್ಕೂ ಈ ವಿಚಾರನಾ? ಶ್ರೀಲೀಲಾ ಅವರೇ ಸ್ಪಷ್ಟನೆ ನೀಡಬೇಕಿದೆ.

sreeleela 2

ಸಮಂತಾ, ರಶ್ಮಿಕಾ ಮಂದಣ್ಣ (Rashmika Mandanna), ಕೀರ್ತಿ ಸುರೇಶ್ (Keerthy Suresh) ಅವರಂತೆ ತಾವು ಕೂಡ ಬಾಲಿವುಡ್ ಮಿಂಚಬೇಕೆಂದು ಶ್ರೀಲೀಲಾ ಕೂಡ ಹೆಜ್ಜೆ ಇಟ್ಟಿದ್ದಾರೆ. ಬಾಲಿವುಡ್‌ನಲ್ಲಿ ಆದ್ರೂ ಗೆಲ್ತಾರಾ ಕಾದುನೋಡಬೇಕಿದೆ.

sreeleela 1

ಅಂದಹಾಗೆ, ಜನಾರ್ದನ ರೆಡ್ಡಿ ಪುತ್ರ ಕಿರೀಟಿಗೆ ಜೋಡಿಯಾಗಿ ಶ್ರೀಲೀಲಾ ಕನ್ನಡಕ್ಕೆ 3 ವರ್ಷಗಳ ಬಳಿಕ ಬರುತ್ತಿದ್ದಾರೆ. ಇದೇ ಜುಲೈ 18ಕ್ಕೆ ‘ಜೂನಿಯರ್’ (Junior) ಸಿನಿಮಾ ರಿಲೀಸ್ ಆಗಲಿದೆ. ಮೇ 19ರಂದು ಈ ಸಿನಿಮಾದ ಮೊದಲ ಸಾಂಗ್ ರಿಲೀಸ್ ಆಗಲಿದೆ.

TAGGED:
Share This Article