ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಸಿನಿಮಾದ ಆಡಿಯೋ (Audio) ಹಕ್ಕು (Right) ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ. ಈವರೆಗೂ ದಾಖಲಾಗಿದ್ದ ಎಲ್ಲ ಮೊತ್ತವನ್ನೂ ಅದು ಹಿಂದಿಕ್ಕಿದ್ದು ಟಿ ಸೀರಿಸ್ ಕಂಪೆನಿಯು 65 ಕೋಟಿ ರೂಪಾಯಿ ಹಣ ನೀಡಿ ಆಡಿಯೋ ಹಕ್ಕುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ರಿಲೀಸ್ ಆಗುವ ಅಷ್ಟು ಭಾಷೆಗಳಿಗೆ ಈ ಹಕ್ಕು ಅನ್ವಯಿಸಲಿದೆ.
ಈ ಹಿಂದೆ ರಿಲೀಸ್ ಆಗಿರುವ ಬಾಹುಬಲಿ ಚಿತ್ರದ ಆಡಿಯೋ ಹಕ್ಕು ಹತ್ತು ಕೋಟಿ ಸೇಲ್ ಆಗಿತ್ತು. ಆರ್.ಆರ್.ಆರ್ ಆಡಿಯೋ ಹಕ್ಕು 25 ಕೋಟಿಗೆ ಬಿಕರಿ ಆಗಿತ್ತು. ಸಾಹೋ ಸಿನಿಮಾದ ಆಡಿಯೋ ಹಕ್ಕು ಕೂಡ 22 ಕೋಟಿಗೆ ಸೇಲ್ ಆಗಿತ್ತು. ಈ ಎಲ್ಲ ದಾಖಲೆಗಳನ್ನೂ ಪುಷ್ಪ 2 ಸಿನಿಮಾ ಮುರಿದಿದೆ. ಅಲ್ಲದೇ, ಓಟಿಟಿಗೂ ಭಾರೀ ಮೊತ್ತಕ್ಕೆ ಮಾತುಕತೆ ನಡೆಯುತ್ತಿದೆ ಎಂದು ವರದಿ ಆಗಿದೆ. ಇದನ್ನೂ ಓದಿ:ಮಾಲ್ಡೀವ್ಸ್‌ನಲ್ಲಿ ಮಲಯಾಳಿ ಸುಂದರಿ ಪ್ರಿಯಾ
ಈಗಾಗಲೇ ಪುಷ್ಪ 2 ಸಿನಿಮಾದ ಎರಡು ಹಂತದ ಚಿತ್ರೀಕರಣ ಮುಗಿದಿದೆ. ಚಿತ್ರದ ನಿರ್ಮಾಪಕರ ಹಾಗೂ ನಿರ್ದೇಶಕರ ಮನೆ, ಕಚೇರಿ ಮೇಲೆ ಐಟಿ ಮತ್ತು ಇಡಿ ದಾಳಿ ನಡೆದ ಬೆನ್ನಲ್ಲೇ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ. ಇನ್ನೇನು ಸದ್ಯದಲ್ಲೇ ಮುಂದಿನ ಹಂತದ ಶೂಟಿಂಗ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಅಲ್ಲು ಅಭಿಮಾನಿಗಳಿಗೆ ಭಾರೀ ಮೊತ್ತಕ್ಕೆ ಆಡಿಯೋ ರೈಟ್ಸ್ ಸೇಲ್ ಆಗಿದ್ದು ಸಂಭ್ರಮ ತಂದಿದೆ.