ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ನಟ ಅಲ್ಲು ಅರ್ಜುನ್‌ಗೆ (Allu Arjun) ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಬೆನ್ನಲ್ಲೇ ‘ಪುಷ್ಪ 2’ (Pushpa 2) ನಟಿ ರಶ್ಮಿಕಾ ಮಂದಣ್ಣ (Rashmika Mandanna) ರಿಯಾಕ್ಟ್ ಮಾಡಿದ್ದಾರೆ. ಈ ಪರಿಸ್ಥಿತಿಯು ನಂಬಲಾಗದ ಆಘಾತವುಂಟು ಮಾಡಿದೆ ಎಂದು ಅಲ್ಲು ಅರ್ಜುನ್ ಬಂಧನಕ್ಕೆ ರಶ್ಮಿಕಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ನಾನು ಏನು ನೋಡಿದೆನೋ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಈ ಘಟನೆ ನಡೆದಿದ್ದು, ನಿರೀಕ್ಷಿತವಾಗಿ. ಇದರ ಬಗ್ಗೆ ಬೇಸರವಿದೆ. ನಟ ಅನ್ನೋ ಒಂದೇ ಒಂದು ಕಾರಣಕ್ಕೆ ಆರೋಪ ಹೊರಿಸುವುದನ್ನು ನೋಡಿದರೆ ಬೇಸರವಾಗುತ್ತದೆ. ಈ ಪರಿಸ್ಥಿತಿಯು ನಂಬಲಾಗದ ಆಘಾತವುಂಟು ಮಾಡಿದೆ ಎಂದು ರಶ್ಮಿಕಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ಪರ ನಟಿ ಬ್ಯಾಟ್ ಬೀಸಿದ್ದಾರೆ.ಇದನ್ನೂ ಓದಿ:1 ತಿಂಗಳ ಹಿಂದೆಯಷ್ಟೇ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ನಿಂದ ರಿಲೀಫ್ ಪಡೆದಿದ್ದ ಅಲ್ಲು ಅರ್ಜುನ್
Advertisement
Advertisement
ಇನ್ನೂ ಸುಕುಮಾರ್ ನಿರ್ದೇಶನದ ‘ಪುಷ್ಪ 2’ 1000ಕ್ಕೂ ಅಧಿಕ ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದ ಐಕಾನ್ ಸ್ಟಾರ್ ಫ್ಯಾನ್ಸ್‌ಗೆ ಈ ವಿಚಾರ ಖುಷಿ ಕೊಟ್ಟಿದೆ.