ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ರಾಖಿ ಹಬ್ಬದಂದು ಮುದ್ದು ತಂಗಿಗೆ ಎಮೋಷನಲ್ ಆಗಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಐ ಲವ್ ಯೂ ನನ್ನ ಗೊಂಬೆ ಎಂದು ತಂಗಿ ಶಿಮೋನ್‌ಗೆ ಲವ್ಲಿ ನೋಟ್ ಬರೆದಿದ್ದಾರೆ. ಇದನ್ನೂ ಓದಿ:ಕೈಹಿಡಿಯದ ಅದೃಷ್ಟ- ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಚಿತ್ರ ಹೀನಾಯ ಸೋಲು
ರಕ್ಷಾ ಬಂಧನದಂದು ತಂಗಿಗೆ ವಿಶೇಷವಾಗಿ ಶುಭಕೋರಿದ್ದಾರೆ. ಪುಟ್ಟ ತಂಗಿ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನೀನು ಕೂಡ ಮನಸ್ಸಿನಿಂದ ಒಳ್ಳೆಯ ಹುಡುಗಿಯಾಗಿ ಬೆಳೆಯುತ್ತೀಯಾ ಎಂದು ನಾನು ಭಾವಿಸುತ್ತೇನೆ. ಎಲ್ಲರೂ ಗೌರವಿಸುವ ವ್ಯಕ್ತಿಯಾಗುತ್ತೀಯಾ ಎಂದು ನಂಬಿದ್ದೇನೆ. ನೀನು ಜೀವನದಲ್ಲಿ ಹಲವಾರು ಯುದ್ಧಗಳನ್ನು ಮಾಡಬೇಕಿಲ್ಲ. ನನಗೆ ಎಷ್ಟು ಸಾಧ್ಯವೋ ಅಷ್ಟು ನಾನು ನಿನ್ನನ್ನು ರಕ್ಷಿಸಲು ಪ್ರಯತ್ನಿಸುತ್ತೇನೆ ಎಂದು ನಾನು ನಿನಗೆ ಭರವಸೆ ನೀಡುತ್ತೇನೆ ಎಂದು ಭಾವುಕವಾಗಿ ರಶ್ಮಿಕಾ ಬರೆದುಕೊಂಡಿದ್ದಾರೆ.
- Advertisement -
View this post on Instagram
- Advertisement -
ನೀನು ಈ ಜಗತ್ತಿನಲ್ಲಿ ಸುರಕ್ಷಿತವಾಗಿ ಮತ್ತು ಸಂತೋಷವಾಗಿರುತ್ತೀಯಾ ಎಂದು ನಾನು ಭಾವಿಸುತ್ತೇನೆ. ನಿಮ್ಮಂತಹ ಎಲ್ಲಾ ಚಿಕ್ಕ ಹುಡುಗಿಯರು ಕೂಡ ಇಲ್ಲಿ ಸಂತೋಷದಿಂದ ಸುರಕ್ಷಿತ ಸ್ಥಳವಾಗಿ ಬದುಕಬಹುದಾಗಿದೆ. ಐ ಲವ್ ಯೂ, ನನ್ನ ಗೊಂಬೆ ಎಂದು ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
- Advertisement -
- Advertisement -
ಅಂದಹಾಗೆ, ರಶ್ಮಿಕಾರ ತಂಗಿಯ ಹೆಸರು ಶಿಮೋನ್ ಮಂದಣ್ಣ. ನಟಿಗಿಂತ 17 ವರ್ಷ ಚಿಕ್ಕವರು ಶಿಮೋನ್. ಆಗಾಗ ಮುದ್ದು ತಂಗಿಯ ಫೋಟೋಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.
ಇನ್ನೂ ‘ಪುಷ್ಪ 2’ (Pushap 2) ಮತ್ತು ‘ಛಾವಾ’ (Chhava) ಸಿನಿಮಾ ಇದೇ ಡಿ.6ಕ್ಕೆ ರಿಲೀಸ್ ಆಗಲಿದೆ. ಕುಬೇರ, ದಿ ಗರ್ಲ್‌ಫ್ರೆಂಡ್, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ಜ್ಯೂ.ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾಗೆ ಇವರೇ ನಾಯಕಿ ಎನ್ನಲಾಗುತ್ತಿದೆ. ಅಧಿಕೃತ ಅಪ್‌ಡೇಟ್‌ಗೆ ಕಾಯಬೇಕಿದೆ.