ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಜಿಮ್‌ನಲ್ಲಿ ಕಾಲಿಗೆ ಪೆಟ್ಟಾದ ಹಿನ್ನೆಲೆ ನಡೆಯಲು ಕಷ್ಟಪಡುತ್ತಿರುವ ಸ್ಥಿತಿಯಲ್ಲಿ ಇಂದು (ಜ.22) ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಕುಂಟುತ್ತಾ ವ್ಹೀಲ್ ಚೇರ್‌ನಲ್ಲಿ ನಟಿ ಕುಳಿತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:BBK 11: ಒಳ್ಳೆಯ ಸಂಗಾತಿ ಸಿಗುತ್ತಾಳೆ- ಮಂಜು ಮದುವೆ ಬಗ್ಗೆ ಭವಿಷ್ಯ ನುಡಿದ ಗುರೂಜಿ
Advertisement
ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದು, ಕುಂಟುತ್ತಾ ಕಾರಿನಿಂದ ಇಳಿದು ವ್ಹೀಲ್ ಚೇರ್‌ನಲ್ಲಿ ಕೂರಲು ಹರಸಾಹಸ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಕಾಲು ನೋವಿನ ನಡುವೆಯೂ ಒಪ್ಪಿಕೊಂಡಿರುವ ಸಿನಿಮಾ ಕೆಲಸ ಮಾಡಲು ಹೈದರಾಬಾದ್‌ನಿಂದ ಮುಂಬೈಗೆ ಅವರು ತೆರಳಿದ್ದಾರೆ. ‘ಛಾವಾ’ ಸಿನಿಮಾಗೆ ಡಬ್ಬಿಂಗ್ ಮಾಡೋದ್ರಲ್ಲಿ ಅವರು ಬ್ಯುಸಿಯಾಗಿದ್ದಾರೆ. ಅದೇನೇ ಇರಲಿ ಶ್ರೀವಲ್ಲಿ ಬೇಗ ಗುಣಮುಖರಾಗಲಿ ಎಂದು ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ.
Advertisement
View this post on Instagram
Advertisement
ಇತ್ತೀಚೆಗೆ ಜಿಮ್‌ನಲ್ಲಿ ಕಾಲಿಗೆ ಪೆಟ್ಟಾಗಿರುವ ಬಗ್ಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಜಿಮ್‌ನಲ್ಲಿ ನಾನು ಗಾಯಗೊಂಡಿದ್ದೇನೆ. ಮುಂದಿನ ಕೆಲ ವಾರ ಅಥವಾ ತಿಂಗಳ ಕಾಲ ನಾನು ವಿಶ್ರಾಂತಿಯಲ್ಲಿರುತ್ತೇನೆ. ಚೇತರಿಕೆಯಾಗಲು ಎಷ್ಟು ಸಮಯ ಬೇಕಾಗಬಹುದು ಎನ್ನುವುದು ದೇವರಿಗೆ ಮಾತ್ರ ತಿಳಿದಿದೆ. ನನ್ನ ಕಾಲಿನ ನೋವು ಗುಣವಾದ ಬಳಿಕ ನಾನು ಥಾಮ, ಸಿಕಂದರ್ ಮತ್ತು ಕುಬೇರ ಸೆಟ್‌ಗೆ ಮರಳುತ್ತೇನೆ. ಈ ವಿಳಂಬಕ್ಕೆ ಕ್ಷಮೆ ಕೋರುತ್ತೇನೆ ಎಂದಿದ್ದರು.
Advertisement
ಇನ್ನೂ ಸಿಖಂದರ್, ದಿ ಗರ್ಲ್‌ಫ್ರೆಂಡ್, ರೈನ್‌ಬೋ ಸೇರಿದಂತೆ ಹಲವು ಸಿನಿಮಾಗಳು ನಟಿಯ ಕೈಯಲ್ಲಿವೆ.