‘ಆವೇಶಂ’ ಸಿನಿಮಾದ ಸಕ್ಸಸ್ ಮೂಲಕ ಫಹಾದ್ ಫಾಸಿಲ್ (Fahadh Fasil) ಕೆರಿಯರ್‌ನಲ್ಲಿ ದೊಡ್ಡ ಗೆಲುವನ್ನು ಕಂಡಿದ್ದಾರೆ. ಈ ಸಿನಿಮಾದ ವಿಚಾರವಾಗಿ ಫಹಾದ್ ಸುದ್ದಿಯಲ್ಲಿದ್ದಾರೆ. ಇದರ ನಡುವೆ ಇತ್ತೀಚೆಗೆ ಫಹಾದ್ ತಮಗಿರುವ ವಿಚಿತ್ರ ಕಾಯಿಲೆ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
Advertisement
ಇತ್ತೀಚಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕುತೂಹಲಕಾರಿ ವಿಚಾರದ ಬಗ್ಗೆ ಮಾತನಾಡಿದ್ದಾರೆ. ADHD ಅನ್ನೋದು ಈ ಕಾಯಿಲೆಯ ಹೆಸರು. ಇದು ನರಕ್ಕೆ ಸಂಬಂಧಪಟ್ಟಿದ್ದು. ಇದು ಮಿದುಳಿನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಇದು ಮಕ್ಕಳಲ್ಲಿ ಸಾಮಾನ್ಯ ಸಮಸ್ಯೆ. ಆದರೆ, ದೊಡ್ಡವರಿಗೆ ಈ ರೋಗದಿಂದ ತೊಂದರೆ ಉಂಟಾಗುತ್ತದೆ ಎಂದು ನಟ ಮಾತನಾಡಿದ್ದಾರೆ.
Advertisement
Advertisement
ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಂಡ್ರೆ ಇದು ವಾಸಿ ಆಗಬಹುದು. ಆದ್ರೆ ಇದು 41ನೇ ವಯಸ್ಸಿನಲ್ಲಿ ಪತ್ತೆಯಾಗಿದೆ. ಈ ವಯಸ್ಸಲ್ಲಿ ಗುಣಮುಖವಾಗೋದು ಕಡಿಮೆ ಎಂದು ನಟ ಹೇಳಿದ್ದಾರೆ.
Advertisement
ಅಂದಹಾಗೆ, ‘ಪುಷ್ಪ 2’ನಲ್ಲಿ (Pushpa 2) ಫಹಾದ್ ಫಾಸಿಲ್ ವಿಲನ್ ಆಗಿ ನಟಿಸಿದ್ದಾರೆ. ಇದರ ಮಲಯಾಳಂ ಹಲವು ಸಿನಿಮಾಗಳು ಅವರ ಕೈಯಲ್ಲಿವೆ. ನಿರ್ಮಾಪಕನಾಗಿ ಫಹಾದ್ ಗುರುತಿಸಿಕೊಳ್ಳುತ್ತಿದ್ದಾರೆ.