ಡೆಹ್ರಾಡೂನ್: ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಬಾರಿ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ನಡೆದ ರಾಜ್ಯ ಚುನಾವಣೆಯಲ್ಲಿ ಸೋತ ಬಳಿಕ ಚಂಪಾವತ್‍ನಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪುಷ್ಕರ್ ಸಿಂಗ್ ಧಮಿ ಅವರು ಕಾಂಗ್ರೆಸ್ ಅಭ್ಯರ್ಥಿ ನಿರ್ಮಲಾ ಗಹ್ತೋಡಿ ಅವರನ್ನು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಧಾಮಿ 54,000 ಮತಗಳನ್ನು ಪಡೆದರೆ, ಗಹತೋಡಿ ಕೇವಲ 3,607 ಮತಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಬಳಿಕ ಪ್ರಿಯಾಂಕಾ ಗಾಂಧಿಗೂ ಕೊರೊನಾ
Advertisement
प्रिय चंपावतवासियों,
चंपावत उपचुनाव में आपके द्वारा वोटों के माध्यम से बरसाए गए प्रेम व आशीर्वाद से मन अत्यंत भावुक है, नि:शब्द हूं।@narendramodi @JPNadda @AmitShah @rajnathsingh @JoshiPralhad@dushyanttgautam @BJP4India @BJP4UK pic.twitter.com/VH5egOEW2l
— Pushkar Singh Dhami (@pushkardhami) June 3, 2022
Advertisement
ರಾಜ್ಯದ ಕುಮಾನ್ ಪ್ರದೇಶದಲ್ಲಿ ಕಾಂಗ್ರೆಸ್‍ನ ನಿರ್ಮಲಾ ಗೆಹ್ತೋಡಿ ಅವರೊಂದಿಗೆ ಪುಷ್ಕರ್ ಸಿಂಗ್ ಧಮಿ ನೇರವಾಗಿ ಸ್ಪರ್ಧಿಸಿದ್ದರು. ಮತ್ತೊಂದೆಡೆ ಸಮಾಜವಾದಿ ಪಕ್ಷದ ಮನೋಜ್ ಕುಮಾರ್ ಭಟ್ ಮತ್ತು ಸ್ವತಂತ್ರ ಅಭ್ಯರ್ಥಿ ಹಿಮಶು ಗಡ್ಕೋಟಿ ಚುನಾವಣಾ ಕಣದಲ್ಲಿದ್ದರು. ಇದನ್ನೂ ಓದಿ: ಸೋನಿಯಾ ಗಾಂಧಿ ಶೀಘ್ರವೇ ಗುಣಮುಖರಾಗಲಿ – ಮೋದಿ ಶುಭಹಾರೈಕೆ
Advertisement
Congratulations to Uttarakhand’s dynamic CM @pushkardhami for the record win from Champawat. I am confident he will work even harder for the progress of Uttarakhand. I thank the people of Champawat for placing their faith in BJP and laud our Karyakartas for their hardwork.
— Narendra Modi (@narendramodi) June 3, 2022
Advertisement
ಸದ್ಯ ಗೆಲುವಿನ ಅಲೆಯಲ್ಲಿರುವ ಪುಷ್ಕರ್ ಸಿಂಗ್ ಅವರು, ಈ ಕುರಿತಂತೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಚಂಪಾವತ್ ಜನರೇ, ನನಗೆ ಮಾತುಗಳೇ ಬರದಂತಾಗಿದೆ. ನಿಮ್ಮ ಮತಗಳ ಮೂಲಕ ನನಗೆ ಸಿಕ್ಕಿರುವ ಪ್ರೀತಿ ಆಶೀರ್ವಾದವನ್ನು ನೋಡಿ ನಾನು ಭಾವುಕನಾಗಿದ್ದೇನೆ ಎಂದು ಧನ್ಯವಾದ ತಿಳಿಸಿದ್ದಾರೆ.