ದಕ್ಷಿಣದ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಇದೇ ಮೊದಲ ಬಾರಿಗೆ ತಮ್ಮ ಲೈಗರ್ (Liger) ಸಿನಿಮಾದ ಸೋಲಿನ ಕುರಿತು ಮಾತನಾಡಿದ್ದಾರೆ. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ (Chiranjeevi) ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡಿರುವ ಪುರಿ, ತಮಗಾದ ನಷ್ಟ ಮತ್ತು ನೋವುಗಳನ್ನು ಹಂಚಿಕೊಂಡಿದ್ದು, ಸೋಲಿನಿಂದ ಆದಷ್ಟು ಹೊರ ಬರುವ ವಿಶ್ವಾಸವನ್ನೂ ಅವರು ವ್ಯಕ್ತ ಪಡಿಸಿದ್ದಾರೆ.
Advertisement
ವಿಜಯ್ ದೇವರಕೊಂಡ ನಟನೆಯ ‘ಲೈಗರ್’ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಭಾರೀ ನಿರೀಕ್ಷೆ ಮೂಡಿಸಿತ್ತು. ಸಿನಿಮಾ ರಿಲೀಸ್ ಗೂ ಮುನ್ನ ನೂರಾರು ಕೋಟಿ ಬಿಸ್ನೆಸ್ ಆಗಲಿದೆ ಎಂದು ಅಂದಾಜು ಮಾಡಲಾಗಿತ್ತು. ಹಾಗಾಗಿಯೇ ಡಿಜಿಟಲ್ ರೈಟ್ಸ್ ಇನ್ನೂರು ಕೋಟಿಗೆ ಕೇಳಿದರೂ, ಚಿತ್ರತಂಡ ಕೊಟ್ಟಿರಲಿಲ್ಲ. ಆ ಮಟ್ಟಿಗೆ ಸಿನಿಮಾದ ಮೇಲೆ ಚಿತ್ರತಂಡಕ್ಕೆ ವಿಶ್ವಾಸವಿತ್ತು. ಸಿನಿಮಾ ರಿಲೀಸ್ ನಂತರ ಆಗಿದ್ದೇ ಬೇರೆ. ಇದನ್ನೂ ಓದಿ:ಬಾಲಿವುಡ್ ಬದುಕಿಸಿದ ಶಾರುಖ್ ಖಾನ್ ಚಿತ್ರ: 100 ಕೋಟಿ ರೂಪಾಯಿಗೆ ಸೇಲ್
Advertisement
Advertisement
ಲೈಗರ್ ಸಿನಿಮಾ ಪುರಿ ಜಗನ್ನಾಥ್ (Puri Jagannath) ಅವರಿಗೆ ಮತ್ತು ವಿಜಯ್ ದೇವರಕೊಂಡಗೆ (Vijay Devarakonda) ಬಾಲಿವುಡ್ ನಲ್ಲಿ ಭಾರೀ ಯಶಸ್ಸು ತಂದು ಕೊಡಲಿದೆ ಎಂದು ಹೇಳಲಾಗಿತ್ತು. ಹಾಗಾಗಿ ಭರ್ಜರಿಯಾಗಿಯೇ ಪ್ರಮೋಷನ್ ಕೂಡ ಮಾಡಲಾಗಿತ್ತು. ದೇಶದ ಅನೇಕ ಕಡೆ ಪ್ರಿ ರಿಲೀಸ್ ಇವೆಂಟ್ ಕೂಡ ಮಾಡಿ, ಸಾಕಷ್ಟು ಖರ್ಚು ಮಾಡಿದ್ದರು. ಆದರೆ, ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಹೀನಾಯವಾಗಿ ಸೋಲು ಕಂಡಿತು. ಈ ನೋವು ಇಡೀ ಚಿತ್ರತಂಡವನ್ನೇ ಬಾಧಿಸಿತ್ತು.
Advertisement
ಲೈಗರ್ ಸಿನಿಮಾದ ನೋವಿನಲ್ಲಿದ್ದ ಪುರಿ ಜಗನ್ನಾಥ್ ಅವರು ಚಿರಂಜೀವಿಗೆ ಕಾಲ್ ಮಾಡಿ, ಆ ನೋವಿನ ವಿಷಯ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ಸಿನಿಮಾನೂ ಸೋತ ಬಗ್ಗೆ ಉದಾಹರಣೆ ಕೊಟ್ಟಿರುವ ಚಿರಂಜೀವಿ, ‘ನೀನು ಪ್ರತಿಭಾವಂತ ತಂತ್ರಜ್ಞ. ಸೋಲನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ. ನನ್ನ ಒಂದು ಸಿನಿಮಾ ಸೋತಿತು. ಈಗ ಮತ್ತೊಂದು ಸಿನಿಮಾ ಗೆದ್ದಿದೆ. ನೀನೂ ಗೆಲ್ಲುತ್ತೀಯಾ’ ಎಂದು ಸಮಾಧಾನದ ಮಾತುಗಳನ್ನು ಆಡಿದ್ದಾರೆ.