ವಾಷಿಂಗ್ಟನ್: ಸಾಮಾಜಿಕ ಜಾಲತಾಣಗಳಲ್ಲಿ ಈಗ ಮುಖದ ಮೇಲೆ ಬಾಲವಿರುವ ಕ್ಯೂಟ್ ನಾಯಿ ಮರಿ ಸಖತ್ ವೈರಲ್ ಆಗಿದ್ದು. ಈ ನಾಯಿ ಮರಿಯನ್ನು ಕಂಡು ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.
ಒಂದು ಬಾಲವಿರುವ ನಾಯಿಯನ್ನು ನೋಡಿರುತ್ತೇವೆ. ಆದರೆ ಅಮೆರಿಕದ ಮಿಸ್ಸೌರಿಯಲ್ಲಿ ಬೀದಿ ನಾಯಿ ಮರಿಯೊಂದಕ್ಕೆ ಎರಡೆರಡು ಬಾಲವಿದೆ. ಅದರಲ್ಲೂ ವಿಚಿತ್ರವೆಂದರೆ ನಾಯಿ ಮರಿಗೆ ಮುಖದ ಮೇಲೆ ಬಾಲವಿದೆ. ಈ ನಾಯಿ ಮರಿ ಹುಟ್ಟಿದಾಗಿಂದಲೇ ಮುಖದ ಮೇಲೆ ಬಾಲವಿತ್ತೆಂದು ಹೇಳಲಾಗುತ್ತಿದ್ದು, ಸದ್ಯ ಎಲ್ಲೆಡೆ ಈ ನಾಯಿ ಮರಿಯದ್ದೇ ಚರ್ಚೆ ಶುರುವಾಗಿದೆ.
Advertisement
This is Narwhal. He was born with an extra tail on his forehead. It hasn’t wagged yet but he’s working on it. 14/10 always read the instructions before assembling your puppy pic.twitter.com/ge8B0KlLa3
— WeRateDogs® (@dog_rates) November 13, 2019
Advertisement
ನಾಯಿ ಮರಿಯನ್ನು ಕಂಡ ಜನರು ಇದಕ್ಕೆ ಕ್ಯೂಟ್ ಯೂನಿಕಾರ್ನ್ ಎಂದು ಕರೆಯುತ್ತಿದ್ದಾರೆ. ಯೂನಿಕಾರ್ನ್ ಎಂದರೆ ಹಣೆಯ ಮೇಲೆ ಕೊಂಬು ಇರುವ ಕುದುರೆ. ಮಕ್ಕಳ ಕಥೆಗಳಲ್ಲಿ ಬರುವ ಯೂನಿಕಾರ್ನ್‍ಗೆ ಕೊಡಿರುವಂತೆ ಈ ನಾಯಿ ಮರಿಗೆ ಹಣೆಯ ಮೇಲೆ ಬಾಲವಿದೆ. ಆದರೆ ಈ ನಾಯಿ ಮರಿಯ ಅಸಲಿ ಹೆಸರು ನಾರ್ವಲ್. ನಾಯಿ ಮರಿಯನ್ನು ಬೀದಿಯಲ್ಲಿ ಕಂಡು ಎನ್‍ಜಿಓವೊಂದು ಇದನ್ನು ರಕ್ಷಿಸಿದೆ.
Advertisement
look at him go, whalefact pic.twitter.com/N7G2uWMsym
— WeRateDogs® (@dog_rates) November 13, 2019
Advertisement
ಈ ನಾಯಿ ಮರಿ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಇದನ್ನು ಮ್ಯಾಕ್ ಮಿಷನ್ಸ್ ಚಾರಿಟಿ ರಕ್ಷಣೆ ಮಾಡಿತ್ತು. ಈ ವೇಳೆ ಈ ಪುಟ್ಟ ನಾಯಿ ಮರಿಯ ಹಣೆಯ ಭಾಗದಲ್ಲಿ ಪುಟ್ಟ ಬಾಲವಿರುವುದನ್ನು ಗಮನಿಸಿದ ಸದಸ್ಯರು ಪಶು ವೈದ್ಯರ ಬಳಿ ಕರೆದೊಯ್ದಿದ್ದಾರೆ.
ಅಲ್ಲಿ ವೈದ್ಯರು ನಾರ್ವಲ್‍ನನ್ನು ತಪಾಸಣೆ ನಡೆಸಿದ ಬಳಿಕ ನಾಯಿ ಮರಿಯ ಮುಖದ ಮೇಲಿರುವ ಬಾಲ ದೇಹಕ್ಕೆ ಜೋಡಣೆಯಾಗಿಲ್ಲ ಎಂಬುದು ತಿಳಿದು ಬಂದಿದೆ. ಇದರಿಂದ ಅದಕ್ಕೆ ಯಾವುದೇ ಅಪಾಯವಿಲ್ಲ ಎಂದು ಬಾಲವನ್ನು ಕತ್ತರಿಸದೇ ಸುಮ್ಮನೆ ಬಿಟ್ಟಿದ್ದಾರೆ.
Dog tweet #849: Puppy is unicorn.
His name is Narwhal.
No, it doesn't wag.https://t.co/xD8pzhlCmo pic.twitter.com/RvPnEfZ58r
— Luke Matthews (@ByLukeMatthews) November 13, 2019
ಈ ಮುದ್ದಾದ ನಾಯಿ ಮರಿಯ ಫೋಟೋಗಳನ್ನು ‘ವಿ ರೇಟ್ ಡಾಗ್ಸ್’ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಅಪರೂಪದ ನಾಯಿ ಮರಿಗೆ ಕ್ಯೂಟ್‍ನೆಸ್‍ಗೆ ಪ್ರಾಣಿ ಪ್ರೀಯರು ಫಿದಾ ಆಗಿದ್ದಾರೆ. ಯೂನಿಕಾರ್ನ್ ತರಹ ಈ ನಾಯಿ ಮರಿಗೆ ಪಪ್ಪಿಕಾರ್ನ್ ಎಂದು ಪ್ರೀತಿಯಿಂದ ಕರೆದಿದ್ದಾರೆ.