ಮಂಗಳೂರು: ಅದೃಷ್ಟ ಇದ್ದರೆ ರೈಲಿನಡಿಗೆ ಬಿದ್ದರೂ ಬದುಕಿ ಬರಬಹುದು ಎನ್ನುವುದಕ್ಕೆ ನೈಜ ನಿದರ್ಶನ ಆಗುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಕಬಕ ರೈಲು ನಿಲ್ದಾಣದ ಬಳಿ ನಾಯಿ ಮರಿಯೊಂದು ಹಳಿ ಮೇಲೆ ಹೋಗುತ್ತಿದ್ದಾಗ ರೈಲು ಅದೇ ಟ್ರಾಕ್ ಮೇಲೆ ಆಗಮಿಸಿದೆ. ರೈಲು ನಾಯಿ ಮರಿಯ ಮೇಲೆಯೇ ಹರಿದು ಹೋಗಿದೆ. ಆದರೆ ನಾಯಿಮರಿ ಭಯದಿಂದಲೇ ಹಳಿಯ ಮಧ್ಯಭಾಗದಲ್ಲಿ ಕುಂಟುತ್ತಾ ನಡೆಯತೊಡಗಿದೆ. ಸ್ವಲ್ಪ ಮುಂದೆ ಹೋಗಿ, ಹಳಿಯ ನಡುವಿನ ಖಾಲಿ ಜಾಗದಲ್ಲಿ ಮಲಗಿದ್ದು, ರೈಲಿನ ಅಷ್ಟೂ ಬೋಗಿಗಳು ತನ್ನ ಮೇಲಿಂದ ಹಾದುಹೋಗುವವರೆಗೂ ಮಲಗಿಬಿಟ್ಟಿತ್ತು.
ಕೊನೆಗೆ ರೈಲು ಹೋಯಿತು ಎನ್ನುವಷ್ಟರಲ್ಲಿ, ಬದುಕಿದೆಯಾ ಬಡ ಜೀವ ಅನ್ನುವಂತೆ ಅಲ್ಲಿಂದ ಓಡಿ ಹೋಗಿದೆ. ಈ ಘಟನೆಯಲ್ಲಿ ನಿಲ್ದಾಣದಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ವೈರಲ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=nz5hHbk_l4Y