ಬೆಂಗಳೂರು: ಗೊಂಬೆಗಳು ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲೂ ಚಿಣ್ಣರಿಗೆ ಬೊಂಬೆಗಳು ಅಂದ್ರೆ ಪಂಚಪ್ರಾಣ. ಇಂತಹ ಅದ್ಭುತ ಗೊಂಬೆಗಳ ಲೋಕವೇ ಧರೆಗಿಳಿದ ಹಾಗೆ ಸಿಲಿಕಾನ್ ಸಿಟಿಯಲ್ಲಿ ಧಾತು ಅಂತರಾಷ್ಟ್ರೀಯ ಬೊಂಬೆಯಾಟ ಉತ್ಸವ ಕಣ್ಮನ ಸೆಳೆದಿದೆ.
ನಗರದ ಜಯನಗರದ ಎಸ್.ಎಸ್.ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಧಾತು ಅಂತರಾಷ್ಟ್ರೀಯ ಬೊಂಬೆಯಾಟ ಉತ್ಸವದಲ್ಲಿ ಗೊಂಬೆಗಳ ಕಲರವ ಮುಗಿಲು ಮುಟ್ಟಿತ್ತು. ಸಭಾಂಗಣದ ಹೊರಗೆ ನಿಲ್ಲಿಸಿದ್ದ ಗೊಂಬೆಗಳು ಎಲ್ಲರ ಗಮನ ಸೆಳೆದವು. ಇದನ್ನು ನೋಡಲು ಬಂದ ಮಕ್ಕಳು ಹಾಗೂ ಪೋಷಕರು ಸಖತ್ ಎಂಜಾಯ್ ಮಾಡಿ ಖುಷಿಪಟ್ಟರು.
ಇನ್ನೂ ಈ ಉತ್ಸವದಲ್ಲಿ ಗೊಂಬೆಗಳ ಮೂಲಕವೇ ವಿಜಯನಗರ ಸಾಮ್ರಾಜ್ಯದ ವೈಭವ, ರಾಮ-ಹನುಮಾನ್ ಯುದ್ಧವನ್ನು ಮರು ಸೃಷ್ಟಿಸಲಾಗಿತ್ತು. ಹೊರ ರಾಜ್ಯವಾದ ತ್ರಿಪುರ ರಾಜ್ಯದ ವೈಭವವನ್ನು ಸಹ ಧರೆಗಿಳಿಸಲಾಗಿತ್ತು. ಮಕ್ಕಳನ್ನು ಗೊಂಬೆಗಳ ಸರ್ಕಸ್ ಮನೋರಂಜಿಸಿದವು. ಅಷ್ಟೇ ಅಲ್ಲದೆ ಇವೆಲ್ಲದರ ಜೊತೆಗೆ ಗೊಂಬೆಗಳ ಮೂಲಕವೇ ಕರಾವಳಿ ಕಲೆ ಯಕ್ಷಗಾನ ಮಾಡಿಸಿದ್ದು ಎಲ್ಲರನ್ನೂ ಮಂತ್ರ ಮುಗ್ಧಗೊಳಿಸಿತ್ತು.
ಒಟ್ಟಿನಲ್ಲಿ ಹಳೆಯ ಕಲೆ ಹಾಗೂ ಅಳಿವಿನಂಚಿನಲ್ಲಿದ್ದ ಬೊಂಬೆಯಾಟಕ್ಕೆ ಈ ಶೋಗಳು ಬೆಳಕು ನೀಡಿದ್ದಂತೂ ಸುಳ್ಳಲ್ಲ. ಇಂದು ಕೂಡಾ, ಈ ಶೋ ನಡೆಯಲಿದ್ದು, ಎಲ್ಲರು ಹೋಗಿ ಬೊಂಬೆಯಾಟವನ್ನು ಕಣ್ ತುಂಬಿಕೊಂಡು ಎಂಜಾಯ್ ಮಾಡಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv