ಅಮರೀಂದರ್‌ ಹೊಸ ಪಕ್ಷ ಸ್ಥಾಪನೆ – ರೈತರ ಸಮಸ್ಯೆ ಪರಿಹಾರವಾದರೆ ಬಿಜೆಪಿ ಜೊತೆ ಮೈತ್ರಿ

Public TV
1 Min Read
AMARINDAR SINGH AMITH SHA

ಚಂಡೀಗಢ: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಳಿದು ಕಾಂಗ್ರೆಸ್‌ ವಿರುದ್ಧ ಬಂಡಾಯ ಸಾರಿದ್ದ ಕ್ಯಾ.ಅಮರೀಂದರ್‌ ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ.

ಮುಂದಿನ ಚುನಾವಣೆಯ ವೇಳೆ ಬಿಜೆಪಿ ಜೊತೆ ಮೈತ್ರಿಯ ಸುಳಿವನ್ನು ಅಮರೀಂದರ್‌ ನೀಡಿದ್ದಾರೆ. ಕೃಷಿ ಕಾಯ್ದೆಯನ್ನು ರದ್ದು ಪಡಿಸಿದರೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ಅಮರೀಂದರ್ ಸಿಂಗ್ ಅವರ ಮಾಧ್ಯಮ ಕಾರ್ಯದರ್ಶಿ ರವೀನ್ ಥುಕ್ರಲ್ ಅವರು ಸರಣಿ ಟ್ವೀಟ್‌ ಮಾಡಿ ಕ್ಯಾಪ್ಟನ್‌ ಪರವಾಗಿ ಹೇಳಿಕೆ ನೀಡಿ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.

amarinder singh

ಟ್ವೀಟ್‌ನಲ್ಲಿ ಏನಿದೆ?
ಪಂಜಾಬಿನ ಭವಿಷ್ಯಕ್ಕಾಗಿ ಯುದ್ಧ ನಡೆಯುತ್ತಿದೆ. ಒಂದು ವರ್ಷದಿಂದ ತಮ್ಮ ಉಳಿವಿಗಾಗಿ ಹೋರಾಡುತ್ತಿರುವ ನಮ್ಮ ರೈತರು ಸೇರಿದಂತೆ ಪಂಜಾಬ್ ಮತ್ತು ಅದರ ಜನರ ಹಿತಾಸಕ್ತಿಗಾಗಿ ಶೀಘ್ರವೇ ನನ್ನದೇ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ  ಘೋಷಿಸುತ್ತೇನೆ. ಇದನ್ನೂ ಓದಿ: ಶೇ.40 ರಷ್ಟು ಟಿಕೆಟ್ ಮಹಿಳೆಯರಿಗೆ – ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ಕ್ರಾಂತಿಕಾರಿ ನಿರ್ಧಾರ

ರೈತರ ಸಮಸ್ಯೆಯನ್ನು ಪರಿಹರಿಸಿದರೆ 2022 ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತೇವೆ. ನಮ್ಮ ಮನಸ್ಥತಿಗೆ ಸರಿ ಹೊಂದುವ ಪಕ್ಷಗಳ ಜೊತೆ ಮೈತ್ರಿ ನಡೆಸಲು ಚಿಂತನೆ ನಡೆದಿದೆ.

ನನ್ನ ಜನರು ಮತ್ತು ನನ್ನ ರಾಜ್ಯದ ಭವಿಷ್ಯವನ್ನು ಭದ್ರಪಡೆಯುವವರೆಗೂ ನಾನು ವಿಶ್ರಾಂತಿ ಪಡೆಯುವುದಿಲ್ಲ. ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿಂದ ಪಂಜಾಬ್‌ಗೆ ರಕ್ಷಣೆ ಬೇಕು. ಶಾಂತಿ ಮತ್ತು ಭದ್ರತೆಗಾಗಿ ಪಂಜಾಬ್‌ ಜನರಿಗೆ ಏನು ಬೇಕಾದರೂ ಮಾಡಲು ಸಿದ್ಧ ಎಂದಿದ್ದಾರೆ.

ಸೆಪ್ಟೆಂಬರ್‌ ಕೊನೆಯಲ್ಲಿ ಅಮರೀಂದರ್‌ ಸಿಂಗ್‌ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಬಂದಿತ್ತು. ಈಗ ಪಕ್ಷ ಸ್ಥಾಪನೆ ಮಾಡಲು ಅಮರೀಂದರ್‌ ಮುಂದಾಗಿದ್ದು ಒಂದು ವೇಳೆ ಮೈತ್ರಿ ಯಶಸ್ವಿಯಾದರೆ ಬಿಜೆಪಿ ಪಂಜಾಬ್‌ನಲ್ಲಿ ಮತ್ತಷ್ಟು ಬಾಗಿಲು ತೆರೆದಂತಾಗುತ್ತದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *