ಪಂಜಾಬಿ ಅಡುಗೆ ಎಂದರೇನೇ ಜನರು ಮುಗಿಬೀಳುತ್ತಾರೆ. ಚನ್ನಾ ಮಸಾಲಾದೊಂದಿಗೆ ಸವಿಯಲಾಗುವ ರೋಟಿ, ನಾನ್, ಕುಲ್ಚಾ ಎಂದರೆ ಅದಕ್ಕೆ ಅಭಿಮಾನಿಗಳೇ ಇದ್ದಾರೆ. ನಾವಿಂದು ಪಂಜಾಬಿ ಸ್ಟೈಲ್ ಆಲೂ ಕುಲ್ಚಾ (Aloo Kulcha) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಮುಖ್ಯವಾಗಿ ಈ ರೆಸಿಪಿ ಅಮೃತಸರದಲ್ಲಿ ತುಂಬಾ ಫೇಮಸ್. ಹೆಚ್ಚಾಗಿ ರೆಸ್ಟೊರೆಂಟ್‌ಗಳಲ್ಲಿ ಉತ್ತರ ಭಾರತದ ಅಡುಗೆಯನ್ನು ಇಷ್ಟಪಡುವವರು ಮನೆಯಲ್ಲಿ ಇದನ್ನು ಒಮ್ಮೆ ಖಂಡಿತವಾಗಿಯೂ ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಹಿಟ್ಟು ತಯಾರಿಸಲು:
ಮೈದಾ – 2 ಕಪ್
ಸಕ್ಕರೆ – 1 ಟೀಸ್ಪೂನ್
ಬೇಕಿಂಗ್ ಪೌಡರ್ – 1 ಟೀಸ್ಪೂನ್
ಅಡುಗೆ ಸೋಡಾ – ಕಾಲು ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಮೊಸರು – ಕಾಲು ಕಪ್
ಎಣ್ಣೆ – 2 ಟೀಸ್ಪೂನ್
ಬೆಚ್ಚಗಿನ ನೀರು – ಅಗತ್ಯಕ್ಕೆ ತಕ್ಕಂತೆ
Advertisement
Advertisement
ಆಲೂಗಡ್ಡೆ ಸ್ಟಫಿಂಗ್ ತಯಾರಿಸಲು:
ಬೇಯಿಸಿ ಸಿಪ್ಪೆ ಸುಲಿದ ಆಲೂಗಡ್ಡೆ – 2
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1
ಕಾಶ್ಮೀರಿ ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
ಗರಂ ಮಸಾಲ ಪುಡಿ – ಅರ್ಧ ಟೀಸ್ಪೂನ್
ತುರಿದ ಶುಂಠಿ – 1 ಇಂಚು
ಆಮ್ಚೂರ್ ಪುಡಿ – ಕಾಲು ಟೀಸ್ಪೂನ್
ಓಂಕಾಳು – ಕಾಲು ಟೀಸ್ಪೂನ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಇತರ ಪದಾರ್ಥಗಳು:
ಕರಿ ಎಳ್ಳು – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 3 ಟೀಸ್ಪೂನ್
ಬೆಣ್ಣೆ – 2 ಟೀಸ್ಪೂನ್ ಇದನ್ನೂ ಓದಿ: ಗರಿಗರಿಯಾದ ಚಿಕನ್ ಸಮೋಸ ಮಾಡಿ ನೋಡಿ
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ಮೈದಾ, ಸಕ್ಕರೆ, ಬೇಕಿಂಗ್ ಪೌಡರ್, ಅಡುಗೆ ಸೋಡಾ, ಉಪ್ಪು, ಮೊಸರು ಮತ್ತು ಎಣ್ಣೆಯನ್ನು ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
* ಚಪಾತಿ ಹಿಟ್ಟಿನ ಹದಕ್ಕೆ ತರಲು ಬೇಕಾಗುವಷ್ಟು ಬೆಚ್ಚಗಿನ ನೀರನ್ನು ಸೇರಿಸಿ, 10 ನಿಮಿಷ ಕಲಸಿಕೊಳ್ಳಿ.
* ಮೃದುವಾದ ಹಿಟ್ಟು ತಯಾರಾದ ಬಳಿಕ ಒದ್ದೆ ಬಟ್ಟೆಯಿಂದ ಹಿಟ್ಟನ್ನು ಮುಚ್ಚಿ, 2 ಗಂಟೆ ವಿಶ್ರಾಂತಿ ನೀಡಿ.
* ಈ ನಡುವೆ ಆಲೂಗಡ್ಡೆ ಸ್ಟಫಿಂಗ್ ಮಿಶ್ರಣ ತಯಾರಿಸಲು ಆಲೂಗಡ್ಡೆ ತೆಗೆದುಕೊಂಡು ಚೆನ್ನಾಗಿ ಮ್ಯಾಶ್ ಮಾಡಿ.
* ಹಸಿರು ಮೆಣಸಿನಕಾಯಿ, ಶುಂಠಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲ, ಆಮ್ಚೂರ್ ಪುಡಿ, ಕೊತ್ತಂಬರಿ ಸೊಪ್ಪು, ಓಂಕಾಳು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಈಗ ವಿಶ್ರಾಂತಿ ನೀಡಿದ ಹಿಟ್ಟನ್ನು ಮತ್ತೊಮ್ಮೆ ನಾದಿಕೊಳ್ಳಿ. ಚಪಾತಿ ಗಾತ್ರದ ಉಂಡೆಗಳನ್ನು ತಯಾರಿಸಿ.
* ಉಂಡೆಗಳನ್ನು ಸ್ವಲ್ಪ ಲಟ್ಟಿಸಿ, 2 ಟೀಸ್ಪೂನ್‌ನಷ್ಟು ಆಲೂಗಡ್ಡೆಯ ಸ್ಟಫಿಂಗ್ ಅದರ ಮಧ್ಯದಲ್ಲಿಟ್ಟು ಬದಿಗಳನ್ನು ಮಧ್ಯಕ್ಕೆ ಮಡಚಿಕೊಳ್ಳಿ.
* ಈಗ ಹಿಟ್ಟನ್ನು ಅರ್ಧದಷ್ಟು ಲಟ್ಟಿಸಿಕೊಂಡು, ಅದರ ಮೇಲೆ ಸ್ವಲ್ಪ ಎಳ್ಳು ಹಾಗೂ ಕೊತ್ತಂಬರಿ ಸೊಪ್ಪು ಸಿಂಪಡಿಸಿ ಇನ್ನಷ್ಟು ಲಟ್ಟಿಸಿ.
* ಹಿಟ್ಟು ತುಂಬಾ ತೆಳ್ಳಗೆ ಅಥವಾ ತುಂಬಾ ದಪ್ಪಗಾಗದಂತೆ ಅಂಡಾಕಾರದಲ್ಲಿ ಲಟ್ಟಿಸಿಕೊಳ್ಳಿ.
* ಈಗ ಕುಲ್ಚಾ ಮೇಲೆ ಸ್ವಲ್ಪ ನೀರನ್ನು ಬ್ರಷ್ ಮಾಡಿ, ಬಿಸಿ ತವಾದ ಮೇಲೆ ಇಟ್ಟು ಕಾಯಿಸಿಕೊಳ್ಳಿ.
* ಕುಲ್ಚಾವನ್ನು ಎರಡೂ ಬದಿಗಳಲ್ಲಿ ಕಾಯಿಸಿಕೊಂಡು, ಕೊನೆಯಲ್ಲಿ ಬೆಣ್ಣೆಯನ್ನು ಬ್ರಷ್ ಮಾಡಿ.
* ಈಗ ರುಚಿಕರವಾದ ಆಲೂ ಕುಲ್ಚಾ ತಯಾರಾಗಿದ್ದು, ಚನ್ನಾ ಮಸಾಲಾದೊಂದಿಗೆ ಸವಿಯಿರಿ. ಇದನ್ನೂ ಓದಿ: ಫ್ರೀ ಟೈಂನಲ್ಲಿ ಮಾಡಿ ನೋಡಿ ಚೈನೀಸ್ ಪಕೋಡಾ