ನವದೆಹಲಿ: ಕೀರ್ತಿ ಕಿಶನ್‌ನ ಯೂನಿಯನ್ ನಾಯಕ ಬಲದೇವ್ ಸಿಂಗ್ (Baldev Singh) ಅವರ ಪುತ್ರಿ ಪಂಜಾಬ್‌ನ ಬಹುಭಾಷಾ ನಟಿ ಸೋನಿಯಾ ಮನ್ (Sonia Mann), ಎಎಪಿ ಮುಖ್ಯಸ್ಥರಾದ ಅರವಿಂದ್ ಕೇಜ್ರಿವಾಲ್ (Arvind Kejriwal) ಸಮ್ಮುಖದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಎಎಪಿಯ ಪಂಜಾಬ್ ಘಟಕವು ಎಕ್ಸ್‌ನಲ್ಲಿ ‘ಕೀರ್ತಿ ಕಿಸಾನ್ ಯೂನಿಯನ್ ನಾಯಕ ಎಸ್ ಬಲದೇವ್ ಸಿಂಗ್ ಅವರ ಪುತ್ರಿ ಹಾಗೂ ಪಂಜಾಬಿ ನಟಿ ಸೋನಿಯಾ ಮಾನ್ ಅವರು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷವನ್ನು ಸೇರಿದ್ದಾರೆ. ಅವರನ್ನು ಆಮ್ ಆದ್ಮಿ ಪಕ್ಷದ ಕುಟುಂಬಕ್ಕೆ ಸ್ವಾಗತಿಸುತ್ತಿದ್ದೇವೆ’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿ ವಿಧಾನಸಭಾ ವಿರೋಧ ಪಕ್ಷದ ನಾಯಕಿಯಾಗಿ ಅತಿಶಿ ಆಯ್ಕೆ
Advertisement
Advertisement
ಸೋನಿಯಾ ಮಾನ್ ವಿವಿಧ ಭಾಷಾ ಚಿತ್ರಗಳಲ್ಲಿ ನಟಿಸಿದ್ದಾರೆ. ಮಲೆಯಾಳಂ, ಹಿಂದಿ, ತೆಲುಗು ಹಾಗೂ ಮರಾಠಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹೈಡ್ ಆ್ಯಂಡ್ ಸೀಕ್ ಎಂಬ ಮಲೆಯಾಳಂ ಸಿನಿಮಾದಲ್ಲೂ ನಟಿಸಿದ್ದು, 2014ರಲ್ಲಿ ಹಿಂದಿಯಲ್ಲಿ ತೆರೆಕಂಡ ಕಹಿನ್ ಹೈ ಮೇರಾ ಪ್ಯಾರ್ ಚಿತ್ರದಲ್ಲೂ ಅಭಿನಯಿಸಿದ್ದಾರೆ. 2020ರಲ್ಲಿ ಹ್ಯಾಪಿ ಹಾರ್ಡಿ ಮತ್ತು ಹೀರ್ ಚಿತ್ರಗಳಲ್ಲೂ ನಟಿಸಿದ್ದಾರೆ. ಇದನ್ನೂ ಓದಿ: ಬಿಸಿಸಿಐ, ದುಬೈ ಕಾನ್ಸುಲೇಟ್‌ನಿಂದ ಸಮುದಾಯ ಜಾಗೃತಿ ಕಾರ್ಯಕ್ರಮ: ಕಾನ್ಸುಲ್ ಜನರಲ್ ಸತೀಶ್ ಶಿವನ್ ಸಲಹೆ
Advertisement
Advertisement
ಸೋನಿಯಾ ತಂದೆ ಬಲದೇವ್ ಸಿಂಗ್ ಮಾಜಿ ನಾಯಕ ಮತ್ತು ಕಾರ್ಯಕರ್ತರಾಗಿದ್ದರು. ಅವರನ್ನು 1980 ರಲ್ಲಿ ಖಲಿಸ್ತಾನಿ ಉಗ್ರಗಾಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದನ್ನೂ ಓದಿ: ರೇಸ್ ವೇಳೆ ಮತ್ತೊಂದು ಕಾರಿಗೆ ಡಿಕ್ಕಿ – ಎರಡು ಪಲ್ಟಿಯಾಗಿ ನಿಂತ ನಟ ಅಜಿತ್ ಕಾರು
ಫೆಬ್ರವರಿ 8ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಪಕ್ಷದ ಹೀನಾಯ ಸೋಲಿನ ನಂತರ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ 2027ರಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯತ್ತ ಗಮನ ಹರಿಸಿದ್ದಾರೆ. ಇದನ್ನೂ ಓದಿ: Champions Trophy 2025 | ಟಾಸ್‌ಗೆದ್ದ ಪಾಕ್ ಬ್ಯಾಟಿಂಗ್ ಆಯ್ಕೆ