ನವದೆಹಲಿ: ಗಣರಾಜ್ಯೋತ್ಸವ ದಿನ ರೈತ ಸಂಘಟನೆಗಳ ಟ್ರಾಕ್ಟರ್ ರ‍್ಯಾಲಿಯಲ್ಲಿ ಕೆಂಪು ಕೋಟೆ ಮೇಲೆ ಬಾವುಟ ಹಾರಿಸಿದ್ದ ನಟ ದೀಪ್ ಸಿಧು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.
Advertisement
ಹರಿಯಾಣದ ಸೋನಿಪತ್ ಪಿಪ್ಲಿ ಟೋಲ್ ಸಮೀಪ ಈ ಅವಘಡ ಸಂಭವಿಸಿದೆ. ಲಾರಿಗೆ ಹಿಂಬದಿಯಿಂದ ಸಿಧು ಇದ್ದ ಸ್ಕಾರ್ಪಿಯೋ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಿಂದ ಸಿಧು ಗಂಭೀರ ಗಾಯಗೊಂಡಿದ್ದು, ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಸಿಧು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಸಿಧು ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೋನಿಪತ್ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ. ವಾಹನದಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
Advertisement
Punjabi actor Deep Sidhu dies in a road accident near Sonipat in Haryana, confirms Sonipat Police. Details awaited.
He was also earlier named as an accused in the 2021 Red Fort violence case. pic.twitter.com/CoLh8ObkJJ
— ANI (@ANI) February 15, 2022
ಗಣರಾಜ್ಯೋತ್ಸವ ದಿನದಂದು ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಸಿಧು ಭಾಗವಹಿಸಿದ್ದ. ಅಲ್ಲದೆ ಈ ವೇಳೆ ಪ್ರತಿಭಟನಾಕಾರರನ್ನು ಪ್ರಚೋದಿಸಿದ ಆರೋಪದ ಮೇಲೆ ಸಿಧುವನ್ನು ಬಂಧಿಸಲಾಗಿತ್ತು. ಇದನ್ನೂ ಓದಿ: 7 ರಾಜ್ಯಗಳ ಅಳಿಯ, 14 ಮಹಿಳೆಯರಿಗೆ ಪತಿ ಈ ನಕಲಿ ವೈದ್ಯ
Advertisement
Advertisement
ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸುವ ಸಂಚಿನಲ್ಲಿ ಭಾಗಿಯಾದ ಆರೋಪದ ಮೇಲೆ ಸಿಧು ಅವರನ್ನು ಎರಡು ಬಾರಿ ಬಂಧಿಸಲಾಯಿತು. ಕಳೆದ ವರ್ಷ ಫೆಬ್ರವರಿಯಲ್ಲಿ ದೀಪ್ ಸಿಧು ಬಂಧನದ ನಂತರ, ಹಿಂಸಾಚಾರವನ್ನು ಸೃಷ್ಟಿಸುವುದು ಮತ್ತು ನಮ್ಮ ರಾಷ್ಟ್ರಧ್ವಜವನ್ನು ಕಡೆಗಣಿಸುವುದು ಆತನ ಉದ್ದೇಶವಾಗಿತ್ತು ಎಂದು ಹೇಳಿದ್ದನು.
Visuals of Punjabi actor Deep Sidhu's car who died in a road accident.
His car crashed into a stationary truck near Pipli toll at Kundli-Manesar-Palwal (KMP) Expressway. Police team at the spot. https://t.co/NzCan24Jtz pic.twitter.com/zixLtaxrHJ
— ANI (@ANI) February 15, 2022
ಸಿಧು ಕೆಂಪು ಕೋಟೆಯ ಘಟನೆಯ ಮುಖ್ಯ ಗಲಭೆಕೋರ ಮತ್ತು ಪ್ರಚೋದಕ, ಅವರು ಜನರನ್ನು ಕೆರಳಿಸಿ ಹಿಂಸಾಚಾರವನ್ನು ಪ್ರಚೋದಿಸಿದ್ದನು. ಕತ್ತಿ, ಕೋಲು ಮತ್ತು ಬಾವುಟ ಹಿಡಿದಿರುವ ವೀಡಿಯೋ ಇದೆ ಎಂದು ಪೊಲೀಸರು ದೆಹಲಿ ನ್ಯಾಯಾಲಯದಲ್ಲಿ ಹೇಳಿದ್ದರು.