ಮುಂಬೈ: ರ‍್ಯಾಪರ್ ಹನಿಸಿಂಗ್ ವಿರುದ್ಧ ಪಂಜಾಬ್ ಮಹಿಳಾ ಆಯೋಗ ಕಾನೂನು ಕ್ರಮಕ್ಕೆ ಮುಂದಾಗಿದೆ. ಇತ್ತೀಚೆಗೆ ಹನಿಸಿಂಗ್ ರಚಿತ ‘ಮಖ್ನಾ’ ಹಾಡಿನ ಸಾಹಿತ್ಯ ಮಹಿಳೆಯರಿಗೆ ಅಗೌರವ ತೋರುತ್ತಿದೆ ಎಂದು ಆಯೋಗ ಆರೋಪಿಸಿದೆ.
ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಪಂಜಾಬ್ ಮಹಿಳಾ ಆಯೋಗ ಕ್ರಿಮಿನಲ್ ಪ್ರಕರಣದಡಿ ಕೇಸ್ ದಾಖಲಿಸಿಕೊಳ್ಳಬೇಕೆಂದು ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ಮನಿಶಾ ಗುಲಾಟಿ, ಹಾಡಿನ ಸಾಹಿತ್ಯ ಅಶ್ಲೀಲತೆಯಿಂದ ಕೂಡಿದೆ. ಈ ಸಂಬಂಧ ಕಾನೂನಿನ ಅಡಿಯಲ್ಲಿ ಪೊಲೀಸ್ ತನಿಖೆ ನಡೆಯಬೇಕಿದೆ. ಹನಿಸಿಂಗ್ ಜೊತೆ ಗಾಯಕಿ ನೇಹಾ ಕಕ್ಕರ್ ಹಾಡಿಗೆ ಧ್ವನಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಪೊಲೀಸರು ಜುಲೈ 12ರೊಳಗೆ ಈ ಕುರಿತ ವರದಿಯನ್ನು ನೀಡಬೇಕೆಂದು ಮಹಿಳಾ ಆಯೋಗ ಕೇಳಿದೆ. ಈ ಹಾಡು ಬ್ಯಾನ್ ಮಾಡಬೇಕು. ಈ ರೀತಿಯ ಹಾಡುಗಳು ಸ್ವಾಸ್ಥ ಸಮಾಜಕ್ಕೆ ಕಪ್ಪು ಚುಕ್ಕೆ ಮತ್ತು ಅವಮಾನಕರವಾಗಿದೆ. ಈ ಸಾಹಿತ್ಯ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಮನಿಶಾ ಗುಲಾಟಿ ಆತಂಕ ವ್ಯಕ್ತಪಡಿಸಿದ್ದಾರೆ.
Advertisement
Advertisement
2013ರಲ್ಲಿ ಹನಿಸಿಂಗ್ ರಚಿತ ‘ಮೈಂ ಹೂಂ ಬಲತ್ಕಾರಿ’ (ನಾನೋರ್ವ ಅತ್ಯಾಚಾರಿ) ಹಾಡು ಭಾರೀ ವಿವಾದಕ್ಕೊಳಗಾಗಿತ್ತು. ಈ ಹಾಡಿನ ಕುರಿತು ವಿಚಾರಣೆ ನಡೆಸಿದ್ದ ಹರ್ಯಾಣ ಮತ್ತು ಪಂಜಾಬ್ ಹೈ ಕೋರ್ಟ್, ಹನಿಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಪಂಜಾಬ್ ಸರ್ಕಾರಕ್ಕೆ ಆದೇಶಿಸಿತ್ತು.
https://www.youtube.com/watch?v=kt4FDwUws28