ಚಂಡೀಗಢ: ಕ್ಷುಲ್ಲಕ ವಿಚಾರಗಳಿಗೆ ಗಲಾಟೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೊಹಾಲಿಯ ಹಳ್ಳಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ತುಂಡುಡುಗೆ ಧರಿಸುವುದಕ್ಕೆ ನಿಷೇಧ ವಿಧಿಸಿದೆ.
ಹೊರಗಡೆಯಿಂದ ಬಂದು ಪೇಯಿಂಗ್ ಗೆಸ್ಟ್ ಹೌಸ್‌ಗಳಲ್ಲಿ ಉಳಿದುಕೊಳ್ಳುವ ಜನರಿಗೆ ಹೊಸ ನಿರ್ಬಂಧಗಳು ವಿಧಿಸಲಾಗಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಎಚ್ಚರಿಕೆ ಫಲಕಗಳನ್ನೂ ಹಾಕಲಾಗುತ್ತಿದೆ. ಇದನ್ನೂ ಓದಿ: ಬಾಂಗ್ಲಾ ಸುಪ್ರೀಂ ಕೋರ್ಟ್ ಸುತ್ತುವರಿದ ಪ್ರತಿಭಟನಾಕಾರರು – ಮುಖ್ಯ ನ್ಯಾಯಮೂರ್ತಿಯಿಂದ ರಾಜೀನಾಮೆ ಘೋಷಣೆ
Advertisement
Advertisement
ಗ್ರಾಮದಲ್ಲಿ ಕ್ಷುಲ್ಲಕ ವಿಚಾರಗಳಿಗೆ ಜಗಳಗಳಾಗುತ್ತಿವೆ ಎಂದು ಖರಾರ್ ಬಳಿಯ ಜಂಡ್‌ಪುರ್ ಗ್ರಾಮದಲ್ಲಿ ಸ್ಥಳೀಯ ಯುವ ಸಮಿತಿಯು ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಧೂಮಪಾನ ಮಾಡುವಂತಿಲ್ಲ. ತುಂಡುಡುಗೆ ತೊಟ್ಟು ಓಡಾಡುವಂತಿಲ್ಲ. ಸರಿಯಾಗಿ ಪರಿಶೀಲಿಸದೇ ಹೊರಗಿನ ಜನರಿಗೆ ಬಾಡಿಗೆ ನೀಡುವಂತಿಲ್ಲ ಎಂದು ಗ್ರಾಮದಲ್ಲಿ ಕ್ರಮಕೈಗೊಳ್ಳಲಾಗಿದೆ.
Advertisement
ಕೆಲವು ಪೇಯಿಂಗ್ ಗೆಸ್ಟ್‌ಗಳು ತಡರಾತ್ರಿಯಲ್ಲಿ ಗಲಾಟೆ ಮಾಡುತ್ತಿರುವುದು ಮತ್ತು ಅನಗತ್ಯ ವಾದ-ವಿವಾದಗಳಿಗೆ ಎಡೆಮಾಡಿಕೊಡುತ್ತಿರುವುದನ್ನು ಗಮನಿಸಿದ ನಿವಾಸಿಗಳು ಗ್ರಾಮದ ಸುರಕ್ಷತೆ ಮತ್ತು ಶಾಂತಿಗೆ ಧಕ್ಕೆ ತರುತ್ತಿದೆ ಎಂದು ಭಾವಿಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಇದನ್ನೂ ಓದಿ: Wayanad Landslides | ವಯನಾಡಿಗೆ ಮೋದಿ ಭೇಟಿ – ದುರಂತ ಭೂಮಿಯಲ್ಲಿ ವೈಮಾನಿಕ ಸಮೀಕ್ಷೆ
Advertisement
ಇದೊಂದು ಹಳ್ಳಿ. ಹೊರಗಿನವರು ಇಲ್ಲಿ ಉಳಿಯಲು ಬಯಸಿದರೆ, ಅವರು ನಿಯಮಗಳನ್ನು ಅನುಸರಿಸಬೇಕು. ಒಳ್ಳೆ ಗುಣದವರಿಗೆ ಇರಲು ಅವಕಾಶ ಮಾಡಿಕೊಡಲಾಗುತ್ತಿದೆ. ಅಪರಾಧದ ಹಿನ್ನೆಲೆ ಹೊಂದಿರುವವರನ್ನು ಊರಿನಿಂದ ಹೊರಹಾಕಲಾಗುವುದು. ಗ್ರಾಮದಲ್ಲಿ ಸುಮಾರು 500 ವಲಸೆ ಕಾಮಿಕರಿದ್ದಾರೆ. ಎಲ್ಲರೂ ನಿಗಮಗಳಿಗೆ ಬದ್ಧರಾಗಬೇಕು ಎಂದು ಸೂಚಿಸಲಾಗಿದೆ.