ರೋಟಿ, ಚಪಾತಿ, ಪೂರಿ ಮುಂತಾದವುಗಳನ್ನು ತಿನ್ಬೇಕಂದ್ರೆ ಒಂದು ಸೈಡ್ ಡಿಶ್ ಇರ್ಲೇಬೇಕು. ಇದಕ್ಕೆ ಪರ್ಫೆಕ್ಟ್ ಕಾಂಬಿನೇಷನ್ ಆಗಿರುವಂತಹ ಸೈಡ್ ಡಿಶ್‌ವೊಂದನ್ನು ಇವತ್ತು ನಿಮ್ಮ ಮುಂದೆ ಇಡುತ್ತಿದ್ದೇವೆ. ಅದೇನಂದ್ರೆ ಪಂಜಾಬ್ ಸ್ಪೆಷಲ್ ರಾಜ್ಮಾ ಮಸಾಲ. ಹಾಗಿದ್ರೆ ತಡಮಾಡದೆ ಹೇಗೆ ಮಾಡುವುದೆಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಫೇಮಸ್ ಸ್ಟ್ರೀಟ್ ಫುಡ್ – ಆಲೂಗಡ್ಡೆ ಟ್ವಿಸ್ಟರ್ ಸಿಂಪಲ್ ಆಗಿ ಮನೆಯಲ್ಲೇ ಮಾಡಿ
Advertisement
ಬೇಕಾಗುವ ಸಾಮಾಗ್ರಿಗಳು:
ಕಿಡ್ನಿ ಬೀನ್ಸ್/ರಾಜ್ಮಾ ಕಾಳು- 1 ಕಪ್
ಟೊಮೆಟೊ-2
ಹೆಚ್ಚಿದ ಈರುಳ್ಳಿ- 2
ಶುಂಠಿ ಬೆಳ್ಳುಳ್ಳಿ ಪೇಸ್ಟ್- 1 ಚಮಚ
ಜೀರಿಗೆ ಪುಡಿ- ಅರ್ಧ ಚಮಚ
ಅರಶಿನ ಪುಡಿ- ಕಾಲು ಚಮಚ
ಧನಿಯಾ ಪುಡಿ- ಅರ್ಧ ಚಮಚ
ಗರಂ ಮಸಾಲ- ಅರ್ಧ ಚಮಚ
ಖಾರದ ಪುಡಿ- 1 ಚಮಚ
ಕಸೂರಿ ಮೇತಿ- ಅರ್ಧ ಚಮಚ
ಸಾಸಿವೆ ಜೀರಿಗೆ (ಒಟ್ಟು)- ಅರ್ಧ ಚಮಚ
ಬೆಣ್ಣೆ- 2 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು- ಕಾಲು ಕಪ್
Advertisement
Advertisement
ಮಾಡುವ ವಿಧಾನ:
Advertisement
- ರಾಜ್ಮಾ ಕಾಳನ್ನು ರಾತ್ರಿ ನೆನೆಹಾಕಿ ಮರುದಿನ ಕುಕ್ಕರ್‌ನಲ್ಲಿ 2 ಕಪ್ ನೀರು ಹಾಕಿ 7ರಿಂದ 8 ವಿಶಲ್ ಕೂಗಿಸಿ ಬೇಯಿಸಿಕೊಳ್ಳಿ. ನಂತರ 2 ಟೊಮೆಟೊ ತೆಗೆದುಕೊಂಡು ಮಿಕ್ಸರ್‌ನಲ್ಲಿ ಪೇಸ್ಟ್ ಮಾಡಿಕೊಳ್ಳಬೇಕು.
- ಒಂದು ಬಾಣಾಲೆಯನ್ನು ಬಿಸಿಗಿಟ್ಟು ಅದಕ್ಕೆ 2 ಚಮಚ ಬೆಣ್ಣೆಯನ್ನು ಹಾಕಿಕೊಳ್ಳಬೇಕು. ಇದಕ್ಕೆ ಸಾಸಿವೆ ಹಾಗೂ ಜೀರಿಗೆಯನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಹೆಚ್ಚಿದ ಈರುಳ್ಳಿಯನ್ನೂ ಹಾಕಿಕೊಂಡು ಚನ್ನಾಗಿ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟನ್ನು ಹಾಕಿಕೊಂಡು ಒಂದು ನಿಮಿಷದವರೆಗೆ ಫ್ರೈ ಮಾಡಿ.
- ನಂತರ ಇದಕ್ಕೆ ಅರಿಶಿನ, ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲ, ಖಾರದ ಪುಡಿ ಎಲ್ಲವನ್ನೂ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಂಡು ಎಣ್ಣೆ ಬಿಡುವ ತನಕ ಬೇಯಿಸಿಕೊಳ್ಳಿ. ಇದಕ್ಕೆ ರುಬ್ಬಿರುವ ಟೊಮೆಟೊ ಪೇಸ್ಟನ್ನು ಹಾಕಿಕೊಳ್ಳಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು 5 ನಿಮಿಷದವರೆಗೆ ಕುದಿಸಿಕೊಳ್ಳಿ.
- ನಂತರ ಇದಕ್ಕೆ ರಾಜ್ಮಾ ಕಾಳನ್ನು ಸೇರಿಸಿಕೊಳ್ಳಿ. ಇದನ್ನು ಚನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಪ್ಲೇಟ್ ಮುಚ್ಚಿ 5 ನಿಮಿಷ ಬೇಯಲು ಬಿಡಿ. ಬಳಿಕ ಇದಕ್ಕೆ ಕಸೂರಿ ಮೇತಿ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಳ್ಳಿ.
- ಇದನ್ನು ಬಿಸಿಬಿಸಿ ರೋಟಿ, ಚಪಾತಿ ಅಥವಾ ಅನ್ನದ ಜೊತೆಗೂ ತಿನ್ನಬಹುದು. ಅಲ್ಲದೇ ಇದು ಆರೋಗ್ಯಕರವಾದ ರೆಸಿಪಿ ಕೂಡಾ ಹೌದು. ಇದನ್ನೂ ಓದಿ: ಕಹಿಯಾದ ಹಾಗಲಕಾಯಿಗೆ ರುಚಿಕರ ಟ್ವಿಸ್ಟ್ ನೀಡಿ – ಈ ರೆಸಿಪಿ ಮಾಡ್ನೋಡಿ