ಚಂಡೀಗಢ: ಕಾಂಗ್ರೆಸ್ ಸರ್ಕಾರವಿರುವ ಪಂಜಾಬ್‍ನಲ್ಲಿ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಲೀಟರ್‌ಗೆ 11.27 ರೂ. ಕಡಿತಗೊಳಿಸಿದ ನಂತರ ಪೆಟ್ರೋಲ್ ಬೆಲೆ ದೇಶದಲ್ಲೇ ಅತಿ ಹೆಚ್ಚು ಇಳಿಕೆ ಕಂಡ ರಾಜ್ಯವಾಗಿದೆ.
Advertisement
ಕೇಂದ್ರ ಸರ್ಕಾರ ಅಬಕಾರಿ ತೆರಿಗೆಯನ್ನು ಲೀಟರ್‌ಗೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ 10 ರೂಪಾಯಿ ಕಡಿಮೆ ಮಾಡಿದ ನಂತರ, ಕೆಲವು ರಾಜ್ಯಗಳು ಸಹ ತೆರಿಗೆ ಕಡಿಮೆ ಮಾಡಿದೆ. ಇದೀಗ ಚರಣ್‍ಜಿತ್ ಸಿಂಗ್ ಛನ್ನಿ ನೇತೃತ್ವದ ಪಂಜಾಬ್ ಸರ್ಕಾರ ವ್ಯಾಟ್‍ನ್ನು ಕಡಿತಗೊಳಿಸಿದ ಪರಿಣಾಮವಾಗಿ ಪೆಟ್ರೋಲ್ ಬೆಲೆ ಲೀಟರ್‌ಗೆ 16.02 ರೂಪಾಯಿ ಮತ್ತು ಡೀಸೆಲ್ ಬೆಲೆ 19.61 ರೂಪಾಯಿ ಕಡಿಮೆಯಾಗಿದೆ. ಈ ಮೂಲಕ ಸರ್ಕಾರ ಜನರ ಸಹಾಯಕ್ಕೆ ಮುಂದಾಗಿದೆ. ಇದನ್ನೂ ಓದಿ: ಇಂಧನ ಮಾರಾಟ ತೆರಿಗೆ ಇಳಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ
Advertisement
Advertisement
ಕೇಂದ್ರ ಸರ್ಕಾರ ತೈಲ ದರ ಇಳಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ 7 ರೂ ತೆರಿಗೆ ಇಳಿಸಿತ್ತು. ಬಳಿಕ ಇದೀಗ ಇತರ ರಾಜ್ಯಗಳು ಕೂಡ ತೈಲ ದರ ಇಳಿಕೆ ಮಾಡುತ್ತಿವೆ. ಪಂಜಾಬ್, ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಾಗಲಿದೆ. ಈ ನಿಟ್ಟಿನಲ್ಲಿ ಪಂಜಾಬ್ ಸರ್ಕಾರ ಪ್ಲಾನ್ ಮಾಡಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 16.02 ರೂಪಾಯಿ ಕಡಿತ ಮಾಡಿ ಜನರಿಗೆ ಹೊರೆ ಕಡಿಮೆ ಮಾಡಿದೆ. ಇದನ್ನೂ ಓದಿ: ಅಡಿಕೆ ನಿಷೇಧ ಕುರಿತು ಬಿಜೆಪಿ ಸಂಸದರ ಹೇಳಿಕೆಗೆ ಖಂಡನೆ
Advertisement