ಚಂಡೀಗಢ: ಕಳ್ಳರನ್ನು ಹಿಡಿದ ಮೇಲೆ ಪೊಲೀಸರು ಗ್ರೂಪ್ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಪಂಜಾಬ್ ಪೊಲೀಸರು ಈಗ ಇಂತಹದ್ದೇ ಗ್ರೂಪ್ ಫೋಟೋ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದ್ದು, ಪರ ಹಾಗೂ ವಿರೋಧ ಕಮೆಂಟ್ಸ್‍ಗಳು ಹರಿದಾಡುತ್ತಿವೆ.
ಏನಿದೆ ಫೋಟೋದಲ್ಲಿ?
ಗ್ರೂಪ್ ಫೋಟೋ ತೆಗೆಸುತ್ತಿರುವ ವೇಳೆ ಆರೋಪಿಗಳನ್ನು ಕುರ್ಚಿ ಮೇಲೆ ಕೂರಿಸಲಾಗಿರುತ್ತದೆ. ಆದರೆ ತಮ್ಮ ತಪ್ಪಿನಿಂದ ಎಚ್ಚೆತ್ತ ಪೊಲೀಸರು ಪುನಃ ಆರೋಪಿಗಳನ್ನು ಕೆಳಗೆ ಕೂರಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಎರಡು ಫೋಟೋಗಳನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ನೆಟ್ಟಿಗರಿಂದ ಭಾರೀ ಕಮೆಂಟ್ಸ್ ಕೇಳಿಬರುತ್ತಿವೆ.
Advertisement
Advertisement
ಪಂಜಾಬ್ ಪೊಲೀಸರು ಇಂತಹದಕ್ಕೆ ಉತ್ತಮರು. ದರೋಢೆಕೊರರ ಜೊತೆ ಪೂರ್ಣ ಗೌರವ ನೀಡುವ ಗ್ರೂಪ್ ಫೋಟೋ ತಗೆಸಿಕೊಂಡಿದ್ದಾರೆ ಎಂದು ಬರೆದು ಅಮನ್ ಸಿಂಗ್ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
Advertisement
Punjab Police at its best.
Showing full izzat to gangsters before realising goof-up. pic.twitter.com/tVLoOu5Her
— Man Aman Singh Chhina (@manaman_chhina) July 18, 2018
Advertisement
ಇದರಲ್ಲಿ ಯಾವುದೇ ತಪ್ಪಿಲ್ಲ. ಇದೊಂದು ಸೌಜನ್ಯದ ಸಂಕೇತ. ಆರೋಪ ಸಾಬೀತು ಆಗುವವರೆಗೆ ಅವರು ಮುಗ್ಧರು ಎಂದು ಕಾನೂನಿನಲ್ಲಿದೆ ಎಂದು ಬರೆದು ಗುರ್ಸಾಟಿಂದರ್ ಸಿಂಗ್ ಟ್ವೀಟ್ ಮಾಡಿ, ಪೊಲೀಸರನ್ನು ಬೆಂಬಲಿಸಿದ್ದಾರೆ.
https://twitter.com/Gursatinder68/status/1019808763258081280