ಪಂಜಾಬ್‌ನಲ್ಲಿ ಸಿಎಂ ನಿವಾಸದ ಮುಂದೆ ಪ್ರತಿಭಟನೆ – ರೈತರ ಮೇಲೆ ಲಾಠಿ ಪ್ರಹಾರ

Public TV
2 Min Read
Punjab Farmers Protest

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್(Bhagwant Mann) ಅವರು ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗೆ (Gujarat Election) ಎಎಪಿ (AAP) ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರೆ, ಇತ್ತ ಸಂಗ್ರೂರ್‌ನಲ್ಲಿರುವ ಅವರ ಮನೆಯ ಹೊರಗೆ ಪ್ರತಿಭಟನೆಯ ಕಿಚ್ಚು ಹೊತ್ತಿದೆ.

ಕೃಷಿ ಕಾರ್ಮಿಕರು ಹಾಗೂ ವ್ಯಾಪಾರಿ ಒಕ್ಕೂಟಗಳು ಸಿಎಂ ನಿವಾಸದ ಎದುರು ಪ್ರತಿಭಟನೆ (Protest) ನಡೆಸುತ್ತಿದ್ದು, ಅದು ಪೊಲೀಸರ (Police) ಜೊತೆಗಿನ ಸಂಘರ್ಷಕ್ಕೆ ತಿರುಗಿದೆ. ಪ್ರತಿಭಟನಾಕಾರರ ಗುಂಪನ್ನು ಚದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ (Police Lathicharge) ನಡೆಸಿದ್ದಾರೆ.

ಸುಮಾರು 8 ಕೃಷಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನೂರಾರು ರೈತರು ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಸಿಎಂ ಭಗವಂತ್ ಮಾನ್ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ರೈತರು (Farmers) ರೊಚ್ಚಿಗೇಳುವ ಮುನ್ನವೇ ಪೊಲೀಸರು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರ ಗುಂಪನ್ನು ಚದುರಿಸಿದ್ದಾರೆ. ಇದನ್ನೂ ಓದಿ: ಪಾಕ್ ಕದನಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಆಘಾತ – ಹೆಸರಿಲ್ಲದ ವೈರಸ್‌ಗೆ ತುತ್ತಾದ ಸ್ಟೋಕ್ಸ್ ಪಡೆ

Bhagwant Mann

ಮಹಾತ್ಮಗಾಂಧಿ ನರೇಗಾ ಯೋಜನೆ – 2005ರ (MGNAREGA) ಅಡಿಯಲ್ಲಿ ದಿನನಿತ್ಯದ ಕೂಲಿಯನ್ನು 700 ರೂಪಾಯಿಗಳಿಗೆ ಹೆಚ್ಚಿಸಬೇಕು. ದಲಿತರಿಗಾಗಿ ಮಾರ್ಲಾ ಭೂಮಿ ಯೋಜನೆಯನ್ನು ಜಾರಿಗೆ ತರಬೇಕು ಹಾಗೂ ಪಂಚಾಯ್ತಿ ಭೂಮಿಯ ಮೂರನೇ ಒಂದು ಭಾಗವನ್ನು ದಲಿತ ಸಮುದಾಯದವರಿಗೆ (Dalits Community) ಗುತ್ತಿಗೆಗೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಇದನ್ನೂ ಓದಿ: PFI ಬ್ಯಾನ್ – ಕೇಂದ್ರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

ಬುಧವಾರ ಬೆಳಿಗ್ಗೆ ಆರಂಭವಾದ ಪ್ರತಿಭಟನೆಯು, ಪಟಿಯಾಲಾ ಬೈಪಾಸ್‌ನಿಂದ ಮುಖ್ಯಮಂತ್ರಿ ನಿವಾಸದ ಕಡೆ ಮೆರವಣಿಗೆ ಮೂಲಕ ತೆರಳಿತ್ತು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ತಡೆದಾಗ ಘರ್ಷಣೆ ಆರಂಭವಾಯಿತು. ಬಳಿಕ ಘೋಷಣೆ ಕೂಗುತ್ತಿದ್ದ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಕಾರ್ಮಿಕರು ಗಾಯಗೊಂಡಿದ್ದಾರೆ.

Punjab Farmers Protest 2

ಈ ಹಿಂದೆ 19 ದಿನಗಳ ಪ್ರತಿಭಟನೆ ನಡೆಸಿದಾಗ ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈಗ ಕಾರ್ಮಿಕರು ಗೇಟ್ ಹೊರಗೆ ಧರಣಿ ಕುಳಿತು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *