ಕೇಜ್ರಿವಾಲ್ ವಿರುದ್ಧ ಟೀಕೆ- ಪೊಲೀಸರಿಂದ ದೆಹಲಿ ಬಿಜೆಪಿ ಮುಖಂಡ ಅರೆಸ್ಟ್

Public TV
1 Min Read
Tajinder Pal Singh Bagga

ನವದೆಹಲಿ: ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಪಂಜಾಬ್‍ನ ಪೊಲೀಸರು ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅವರಿಗೆ ಜೀವ ಬೆದರಿಕೆ ಹಾಕದ್ದ ಹಿನ್ನೆಲೆಯಲ್ಲಿ ಆಪ್ ನಾಯಕ ಸನ್ನಿಸಿಂಗ್ ಅವರು ತಜೀಂದರ್ ಪಾಲ್ ಸಿಂಗ್ ಅವರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ವದಂತಿಗಳನ್ನು ಹರಡುತ್ತಿದ್ದಾರೆ. ಧಾರ್ಮಿಕ ಮತ್ತು ಕೋಮು ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪಿಸಿ ಸೈಬರ್‍ಸೆಲ್‍ನಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿಯನ್ನು ಬಂಧಿಸಿದ್ದಾರೆ.

ARAVINDH KEJIRIWAL

ಘಟನೆ ಏನು?:
ಈ ಹಿಂದೆ ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಸುಳ್ಳು ಚಿತ್ರ ಎಂದು ಲೇವಡಿ ಮಾಡಿದ್ದರು. ಇದನ್ನೂ ಓದಿ: 47 ಲಕ್ಷ ಜನರ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ: ದಿನೇಶ್ ಗುಂಡೂರಾವ್

ಈ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ತಜೀಂದರ್ ಪಾಲ್ ಅವರು, ಸ್ವಾತಂತ್ರ್ಯದ ನಂತರ ಭಾರತದ ಇತಿಹಾಸದಲ್ಲಿ ನಡೆದ ಅತಿದೊಡ್ಡ ನರಮೇಧವನ್ನು ದೆಹಲಿ ವಿಧಾನಸಭೆಯಲ್ಲಿ ಲೇವಡಿ ಮಾಡಲಾಗಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕಾಶ್ಮೀರಿ ಪಂಡಿತರ ನರಮೇಧದ ಕಥೆ ದಿ ಕಾಶ್ಮೀರ ಫೈಲ್ಸ್ ಸಿನಿಮಾವನ್ನು ಟೀಕಿಸಿದ್ದಾರೆ. ಇದರಿಂದಾಗಿ 100 ಕೋಟಿ ಹಿಂದೂಗಳಿಗೆ ಅವಮಾನವಾಗಿದೆ.

the kashmir files 4

ಈ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಕ್ಷಮೆ ಕೇಳಬೇಕು. ಅವರು ಕ್ಷಮೆ ಕೇಳದಿದ್ದರೆ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರು ಅವರನ್ನು ಬದುಕಲು ಬಿಡುವುದಿಲ್ಲ. ಅವರು ಕ್ಷಮೆ ಕೇಳುವವರೆಗೆ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ: 2,500 ಕೋಟಿ ಕೊಡಿ ನಿಮ್ಮನ್ನೂ ಸಿಎಂ ಮಾಡ್ತೀವಿ ಅಂದ್ರು: ಬಾಂಬ್ ಸಿಡಿಸಿದ ಯತ್ನಾಳ್

Tajinder Pal Singh Bagga 1

ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡ ಪಂಜಾಬ್ ಪೊಲೀಸರು ದೆಹಲಿಯಲ್ಲಿದ್ದ ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ 10-12 ಕಾರುಗಳಲ್ಲಿ 50 ಪೊಲೀಸರು ತಾಜೀಂದರ್ ಬಗ್ಗಾ ಅವರನ್ನು ಬಂಧಿಸಲು ದೆಹಲಿಯಲ್ಲಿರುವ ಅವರ ನಿವಾಸಕ್ಕೆ ಬಂದಿದ್ದರು.

Share This Article
Leave a Comment

Leave a Reply

Your email address will not be published. Required fields are marked *