ಚಂಡೀಗಡ: ಜಾರಿ ನಿರ್ದೇಶನಾಲಯವು(ಇಡಿ) ಪಂಜಾಬ್‍ನಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ನಡೆಸಿದ ದಾಳಿಯಲ್ಲಿ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಸಂಬಂಧಿಯೊಬ್ಬರಿಂದ 10 ಕೋಟಿ ರೂ. ನಗದು ವಶಪಡಿಸಿಕೊಂಡಿದೆ.
ನೀವೇಶನದಿಂದ 8 ಕೋಟಿ ಸೇರಿದಂತೆ ಸುಮಾರು 10 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ ರಾಜ್ಯದ 12 ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ತನಿಖೆಯು ಇಂದು ಮುಂಜಾನೆ ಪೂರ್ಣಗೊಂಡಿದೆ. ಸಂಸ್ಥೆಯ ಹಲವಾರು ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿವೆ. ಇದನ್ನೂ ಓದಿ: ಬೆಳಗ್ಗೆ 3-4 ಗಂಟೆಯವರೆಗೆ ನನ್ನ ಮಕ್ಕಳ ಹೋಮ್ ವರ್ಕ್ ಮಾಡಿಸುತ್ತಿದ್ದೆ: ಪ್ರಿಯಾಂಕಾ ಗಾಂಧಿ
Advertisement
Advertisement
ಕಾರ್ಯಾಚರಣೆ ವೇಳೆ ಸರಿ ಸುಮಾರು 10 ಕೋಟಿ ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ. ಚರಣ್‍ಜಿತ್ ಸಿಂಗ್ ಅವರ ಸೋದರಳಿಯನಾದ ಭೂಪಿಂದರ್ ಸಿಂಗ್ ಅಲಿಯಾಸ್ ಹನಿಗೆ ಸಂಬಂಧಿಸಿದ ಮನೆಯಲ್ಲಿ 8 ಕೋಟಿ ರೂ. ನಗದು ಪತ್ತೆಯಾಗಿದೆ. ಇದನ್ನೂ ಓದಿ: ಅಕ್ರಮವಾಗಿ ಒತ್ತುವರಿಯಾಗಿದ್ದ ಜಾಗ ಶಾಲೆಗೆ ವಾಪಸ್ – ತಹಶೀಲ್ದಾರ್‌ಗೆ ಗ್ರಾಮಸ್ಥರಿಂದ ಅಭಿನಂದನೆ
Advertisement
ಸಂದೀಪ್ ಕುಮಾರ್ ಎಂಬ ಮತ್ತೋರ್ವ ವ್ಯಕ್ತಿಗೆ ಸಂಬಂಧಿಸಿದ ನಿವೇಶನವು ಕೂಡಾ ದಾಳಿಗೊಳಗಾಗಿದ್ದು, 8 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟು 12 ಪ್ರದೇಶಗಳ ಮೇಲೆ ಇಡಿ ಅಧಿಕಾರಿಗಳು ದಾಳಿಮಾಡಿದ್ದಾರೆ.
Advertisement
ದಾಳಿಯ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಚನ್ನಿ ಅವರು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿಕರ ಮೇಲೆ ಬಂಗಾಳದ ವಿಧಾನಸಭಾ ಚುನಾವಣೆ ವೇಳೆ ಈ ದಾಳಿ ನಡೆಸಲಾಗಿತ್ತು. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿಯೂ ದಾಳಿ ನಡೆಸಿದ್ದಾರೆ. ಇದು ರಾಜಕೀಯ ಕುತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.