ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳಿಗೆ ಗುಂಡು ಹಾರಿಸಿ ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ಘಟನೆ ಪಂಜಾಬ್‌ನ (Punjab) ಫಿರೋಜ್‌ಪುರದಲ್ಲಿ ನಡೆದಿದೆ.
ಅಮನ್‌ದೀಪ್ ಸಿಂಗ್ (42) ತನ್ನ ಪತ್ನಿ ಜಸ್ವೀರ್ ಕೌರ್ (40) ಮತ್ತು ಅವರ ಹೆಣ್ಣುಮಕ್ಕಳಾದ ಮನ್ವೀರ್ ಕೌರ್ (10) ಮತ್ತು ಪರ್ಮೀತ್ ಕೌರ್ (6) ಮೇಲೆ ಗುಂಡು ಹಾರಿಸಿ ಕೊಂದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶವಗಳ ಬಳಿ ಪಿಸ್ತೂಲ್ ಪತ್ತೆಯಾಗಿದೆ. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನೆಯ ಕೆಲಸಗಾರರು ಬಂದು ನೋಡಿದಾಗ, ಗೇಟ್ ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿದ್ದಾರೆ. ಬಳಿಕ ಬಾಗಿಲು ಬಡಿದು, ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವೇಳೆ ಮೇಲಿನ ಮಹಡಿಯಲ್ಲಿದ್ದ ಬಾಡಿಗೆದಾರರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ನಂತರ ಬಾಗಿಲು ಒಡೆದು ನೋಡಿದಾಗ ಮೃತದೇಹಗಳು ಪತ್ತೆಯಾಗಿವೆ. ಇದನ್ನೂ ಓದಿ: ರಜೆ ಹಾಕಿದ್ದಕ್ಕೆ ಕಾಲೇಜಿನಲ್ಲಿ ಅವಮಾನ – ಕಿರುಕುಳ ತಾಳಲಾರದೇ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ
ಫಿರೋಜ್‌ಪುರ ಪೊಲೀಸರು ಶವಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿ, ಘಟನೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಅಮನ್‌ದೀಪ್ ಸಿಂಗ್ ಒಬ್ಬ ಬಿಲ್ಡರ್ ಮತ್ತು ಫೈನಾನ್ಷಿಯರ್ ಆಗಿದ್ದು, ಸಲೂನ್ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕಾರವಾರ | ಮೊಸಳೆಗೆ ಆಹಾರ ಕೊಡ್ಬೇಡಿ ಎಂದಿದ್ದಕ್ಕೆ ಎಸಿಎಫ್ ಹತ್ಯೆ – ಕೊಲೆಗಾರನಿಗೆ 10 ವರ್ಷ ಜೈಲು

