ಚಂಡೀಗಢ: ಬಜರಂಗದಳದ (Bajrang Dal) ವಿರುದ್ಧ ಹೇಳಿಕೆ ನೀಡಿದ ವಿಚಾರವಾಗಿ ಪಂಜಾಬ್‍ನ (Punjab) ಸಂಗ್ರೂರ್ ಸ್ಥಳೀಯ ನ್ಯಾಯಾಲಯ (Local Court) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ (Mallikarjun Kharge) ಸಮನ್ಸ್ ಜಾರಿ ಮಾಡಿದೆ. ಜುಲೈ 10 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.
Advertisement
ಕಾಂಗ್ರೆಸ್ (Congress) ಬಜರಂಗದಳವನ್ನು ದೇಶವಿರೋಧಿ ಸಂಘಟನೆಗಳೊಂದಿಗೆ ಹೋಲಿಸಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಭರವಸೆ ನೀಡಿದೆ. ಇದು ಅಪಾರ ಕಾರ್ಯಕರ್ತರಿಗೆ ಮಾಡಿರುವ ಅಪಮಾನವಾಗಿದೆ ಎಂದು ಹಿಂದೂ ಸುರಕ್ಷಾ ಪರಿಷತ್ ಭಜರಂಗದಳ ಸಂಸ್ಥಾಪಕ ಸಂಗ್ರೂರ್ ಮೂಲದ ಹಿತೇಶ್ ಭಾರದ್ವಾಜ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯನ್ನು ಸೋಲಿಸಿದ್ದಕ್ಕೆ ಡಿವಿಎಸ್, ಕಟೀಲ್ ಫೋಟೋಗೆ ಚಪ್ಪಲಿ ಹಾರ ಹಾಕಿದ ಹಿಂದೂ ಕಾರ್ಯಕರ್ತರು
Advertisement
Advertisement
ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣಾ (Karnataka Election) ಪ್ರಚಾರದ ವೇಳೆ ಖರ್ಗೆಯವರು ಪಿಎಫ್‍ಐ ಜೊತೆ ಬಜರಂಗದಳವನ್ನು ಹೋಲಿಸಿ ಟೀಕಿಸಿದ್ದಾರೆ. ಇದು ಅವಹೇಳನಕಾರಿ ವಿಚಾರವಾಗಿದೆ ಎಂದು ಅರ್ಜಿದಾರರು ಆರೋಪಿಸಿ ನ್ಯಾಯಾಲಯದಲ್ಲಿ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
Advertisement
ಹಿತೆಶ್ ಅವರ ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಮೂರ್ತಿ ರಮಣದೀಪ್ ಕೌರ್ ಖರ್ಗೆಯವರಿಗೆ ಸಮನ್ಸ್ ನೀಡಿದ್ದಾರೆ. ಇದನ್ನೂ ಓದಿ: ಹಿಂಡನ್‍ಬರ್ಗ್ ವರದಿ ವಿವಾದ – ತನಿಖೆಗೆ 3 ತಿಂಗಳ ಗಡುವು ನೀಡಿದ ಸುಪ್ರೀಂ