ಕೋಲ್ಕತ್ತಾ: ಜಾನಿ ಬೈರ್‌ಸ್ಟೋವ್ (Jonny Bairstow) ಭರ್ಜರಿ ಶತಕ ಹಾಗೂ ಶಶಾಂಕ್ ಸಿಂಗ್, ಪ್ರಭ್ ಸಿಮ್ರನ್‌ಸಿಂಗ್ ಸ್ಫೋಟಕ ಅರ್ಧಶತಕಗಳ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ (Punjab Kings) ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಅಲ್ಲದೇ ಐಪಿಎಲ್ ಇತಿಹಾಸದಲ್ಲಿ ಚೇಸಿಂಗ್‌ನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ರನ್ ಇದಾಗಿದೆ. ಇತ್ತೀಚೆಗೆ ಸನ್ ರೈರ್ಸ್ ಹೈದರಾಬಾದ್ (SRH) ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ (RCB) ಚೇಸಿಂಗ್‌ನಲ್ಲಿ 262 ರನ್ ಗಳಿಸಿತ್ತು. ಇದು ದಾಖಲೆಯಾಗಿತ್ತು. ಇದೀಗ ಪಂಜಾಬ್ ಕಿಂಗ್ಸ್ ಸಹ 262 ರನ್ ಗಳಿಸಿ ಆರ್‌ಸಿಬಿ ದಾಖಲೆ ಸರಿಗಟ್ಟಿದೆ.
Advertisement
Advertisement
262 ರನ್‌ಗಳ ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ ಪಂಜಾಬ್ ಕಿಂಗ್ಸ್ ಆರಂಭದಿಂದಲೇ ಸ್ಫೋಟಕ ಇನ್ನಿಂಗ್ಸ್ ಶುರು ಮಾಡಿತ್ತು. ಮೊದಲ ವಿಕೆಟ್‌ಗೆ 6 ಓವರ್‌ಗಳಲ್ಲಿ ಬರೋಬ್ಬರಿ 93 ರನ್ ಚಚ್ಚಿತ್ತು. ಆರಂಭಿಕ ಪ್ರಭ್ ಸಿಮ್ರನ್ ಸಿಂಗ್ (Prabhsimran Singh) 20 ಎಸೆತಗಳಲ್ಲಿ 54 ರನ್ (5 ಸಿಕ್ಸರ್, 4 ಬೌಂಡರಿ) ರನ್ ಚಚ್ಚಿ ಔಟಾದರು. ಈ ಬೆನ್ನಲ್ಲೇ 26 ರನ್ ಗಳಿಸಿದ್ದ ರೀಲಿ ರೋಸೋ ಸಹ ಪೆವಿಲಿಯನ್‌ಗೆ ಮರಳಿದರು. ಬಳಿಕ ಜಾನಿ ಬೈರ್‌ಸ್ಟೋವ್ ಜೊತೆಗೂಡಿದ ಶಶಾಂಕ್ ಸಿಂಗ್ (Shashank Singh) ಕೆಕೆಆರ್ ಬೌಲರ್‌ಗಳ ವಿರುದ್ಧ ಬೆಂಕಿ-ಬಿರುಗಾಳಿಯಂತೆ ಬ್ಯಾಟಿಂಗ್ ನಡೆಸಿದರು. ಪರಿಣಾಮ ಪಂಬಾಜ್ 18.4 ಓವರ್‌ಗಳಲ್ಲೇ 262 ರನ್ ಚಚ್ಚಿ ವಿಜಯಮಾಲೆ ಹಾಕಿಕೊಂಡಿತು.
Advertisement
ಪಂಜಾಬ್ ಪರ ಜಾನಿ ಬೈರ್‌ಸ್ಟೋವ್ 48 ಎಸೆತಗಳಲ್ಲಿ ಅಜೇಯ 108 ರನ್ (9 ಸಿಕ್ಸರ್, 8 ಬೌಂಡರಿ), ಶಶಾಂಕ್ ಸಿಂಗ್ 68 ರನ್ (8 ಸಿಕ್ಸರ್, 2 ಬೌಂಡರಿ) ಸಿಡಿಸಿ ತಂಡದ ಗೆಲುವಿಗೆ ನೆರವಾದರು.
Advertisement
ರನ್ ಏರಿದ್ದು ಹೇಗೆ?
21 ಎಸೆತ – 50 ರನ್
44 ಎಸೆತ – 100 ರನ್
66 ಎಸೆತ – 150 ರನ್
90 ಎಸೆತ – 200 ರನ್
112 ಎಸೆತ – 262 ರನ್
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕೆಕೆಆರ್ ಬ್ಯಾಟರ್ಸ್‌ಗಳು ಪಂಬಾಜ್ ಬೌಲರ್‌ಗಳನ್ನು ಹಿಗ್ಗಾಮುಗ್ಗಾ ಚೆಂಡಾಡಿದರು. ಆರಂಭಿಕರಾಗಿ ಕಣಕ್ಕಿಳಿದ ಸುನೀಲ್ ನರೇನ್ ಮತ್ತು ಪಿಲ್ ಸಾಲ್ಟ್ (Phil Salt) ಜೋಡಿ ಸಿಕ್ಸರ್ ಬೌಂಡರಿಗಳ ಅಬ್ಬರ ಶುರು ಮಾಡಿತು. ಮೊದಲ ವಿಕೆಟ್‌ಗೆ ಈ ಜೋಡಿ 10.2 ಓವರ್‌ಗಳಲ್ಲಿ 138 ರನ್ ಸಿಡಿಸಿತ್ತು.
ಸುನೀಲ್ ನರೇನ್ 32 ಎಸೆತಗಳಲ್ಲಿ ಸ್ಫೋಟಕ 71 ರನ್ (9 ಸಿಕ್ಸರ್, 4 ಬೌಂಡರಿ) ಚಚ್ಚಿದರೆ, ಪಿಲ್ ಸಾಲ್ಟ್ 37 ಎಸೆಗಳಲ್ಲಿ 75 ರನ್ ಬಾರಿಸಿ ಪೆವಿಲಿಯನ್‌ಗೆ ಮರಳಿದರು. ನಂತರ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ 33 ರನ್, ಆಂಡ್ರೆ ರಸ್ಸೆಲ್ 24 ರನ್, ಶ್ರೇಯಸ್ ಅಯ್ಯರ್ ಸ್ಪೋಟಕ 28 ರನ್, ರಿಂಕು ಸಿಂಗ್ 5 ರನ್, ರಮಣದೀಪ್ ಸಿಂಗ್ 6 ರನ್ ಗಳ ಕೊಡುಗೆ ನೀಡಿದರು.
ಕೆಕೆಆರ್ ಪರ ಅರ್ಷ್‌ದೀಪ್ ಸಿಂಗ್ 2 ವಿಕೆಟ್, ಸ್ಯಾಮ್ ಕರ್ರನ್, ಹರ್ಷಲ್ ಪಟೇಲ್ ಮತ್ತು ರಾಹುಲ್ ಚಹಾರ್ ತಲಾ ಒಂದೊಂದು ವಿಕೆಟ್ ಪಡೆದರು.
ರನ್ ಏರಿದ್ದು ಹೇಗೆ?
23 ಎಸೆತ – 50 ರನ್
48 ಎಸೆತ – 100 ರನ್
71 ಎಸೆತ – 150 ರನ್
93 ಎಸೆತ – 200 ರನ್
120 ಎಸೆತ – 261 ರನ್