ಪಂಜಾಬ್‌ ರಾಜ್ಯಪಾಲ ಸ್ಥಾನಕ್ಕೆ ಬನ್ವಾರಿಲಾಲ್ ಪುರೋಹಿತ್ ರಾಜೀನಾಮೆ

Public TV
1 Min Read
Banwarilal Purohit

ಚಂಡೀಗಢ: ವೈಯಕ್ತಿಕ ಕಾರಣ ನೀಡಿ ಪಂಜಾಬ್ ರಾಜ್ಯಪಾಲ (Punjab Governor) ಬನ್ವಾರಿಲಾಲ್ ಪುರೋಹಿತ್ (Banwarilal Purohit) ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪುರೋಹಿತ್ ಅವರು ಭಾರತದ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ, ವೈಯಕ್ತಿಕ ಮತ್ತು ಇತರ ಕೆಲವು ಬದ್ಧತೆಗಳ ಕಾರಣ ನಾನು ಪಂಜಾಬ್‌ನ ಗವರ್ನರ್ ಮತ್ತು ಆಡಳಿತಾಧಿಕಾರಿ, ಕೇಂದ್ರಾಡಳಿತ ಪ್ರದೇಶ, ಚಂಡೀಗಢದ ಹುದ್ದೆಗೆ ನನ್ನ ರಾಜೀನಾಮೆಯನ್ನು ನೀಡುತ್ತೇನೆ. ದಯವಿಟ್ಟು ಅದನ್ನು ಬಾಧ್ಯತೆಯ ಮೇಲೆ ಸ್ವೀಕರಿಸಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸ್‌ ಠಾಣೆಯಲ್ಲೇ ಮಹಾರಾಷ್ಟ್ರ ಸಿಎಂ ಪಕ್ಷದ ನಾಯಕನ ಮೇಲೆ ಗುಂಡು ಹಾರಿಸಿದ ಬಿಜೆಪಿ ಶಾಸಕ

Bhagwant Mann

ಕೆಲವು ತಿಂಗಳುಗಳಿಂದ ರಾಜ್ಯಪಾಲರು ಮತ್ತು ರಾಜ್ಯದ ಸಿಎಂ ಭಗವಂತ್ ಮಾನ್ ನಡುವೆ ವಿವಿಧ ವಿಷಯಗಳ ಕುರಿತು ಮಾತಿನ ಸಮರ ನಡೆಯುತ್ತಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ಬನ್ವಾರಿಲಾಲ್ ಪುರೋಹಿತ್ ಅವರು ಸಿಎಂಗೆ ಕಟುವಾದ ಪದ ಬಳಸಿ ಪತ್ರ ಬರೆದಿದ್ದರು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು. ತಮ್ಮ ಪತ್ರಗಳಿಗೆ ಉತ್ತರಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದು ಎಂದು ಎಚ್ಚರಿಸಿದ್ದರು.

ರಾಜ್ಯಪಾಲದ ಪತ್ರಕ್ಕೆ ಪ್ರತ್ಯುತ್ತರವಾಗಿ ಪಂಜಾಬ್‌ ಸಿಎಂ ಭಗವಂತ್ ಮಾನ್, ರಾಜ್ಯಪಾಲರು ರಾಜ್ಯದ ಶಾಂತಿ ಪ್ರಿಯ ಜನರಿಗೆ ಬೆದರಿಕೆ ಹಾಕಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಎಲ್‌ಕೆ ಅಡ್ವಾಣಿಗೆ ಭಾರತ ರತ್ನ : ನರೇಂದ್ರ ಮೋದಿ ಘೋಷಣೆ

ಅಕ್ಟೋಬರ್‌ನಲ್ಲಿ ಬನ್ವಾರಿಲಾಲ್ ಪುರೋಹಿತ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ತರ್ನ್ ತರಣ್ ‘ಅಕ್ರಮ’ ಗಣಿಗಾರಿಕೆ ಘಟನೆಯ ಬಗ್ಗೆ ಪತ್ರ ಬರೆದಿದ್ದರು. ಈ ಸಂಬಂಧ ವಿವರವಾದ ವರದಿ ಕೇಳಿದ್ದರು. ಪತ್ರದಲ್ಲಿ ಶಾಸಕರೊಬ್ಬರ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆಯಲ್ಲಿ ಶಾಸಕರ ನಿಕಟವರ್ತಿ ಶಾಮೀಲು, ಪೊಲೀಸ್ ಅಧಿಕಾರಿಗಳ ಅಮಾನತು ಬಗ್ಗೆಯೂ ಅವರು ಆರೋಪಿಸಿದ್ದಾರೆ.

Share This Article