ಚಂಡೀಗಢ: ಪಂಜಾಬ್ ಚುನಾವಣೆ ಅಖಾಡಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಇಂದು ಫಾಜಿಲ್ಕಾ ಜಿಲ್ಲೆಯ ಅಬೋಹರ್ ನಗರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷವೂ ಕಾಂಗ್ರೆಸ್‍ನ ಜೆರಾಕ್ಸ್ ಕಾಪಿ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಭ್ರಷ್ಟಾಚಾರದ ಪಾಲುದಾರರು. ಒಬ್ಬರು ಪಂಜಾಬ್ ಲೂಟಿ ಮಾಡುತ್ತಿದ್ದರೇ ಮತ್ತೊಬ್ಬರು ದೆಹಲಿಯಲ್ಲಿ ಲೂಟಿ ಆರಂಭಿಸಿದ್ದಾರೆ ಎಂದು ಕುಟುಕಿದ್ದಾರೆ.
Advertisement
Advertisement
ಈ ಎರಡು ಪಕ್ಷಗಳು ಪ್ರಸ್ತುತ ಪಂಜಾಬ್ ನಲ್ಲಿ WWF ಆಡುತ್ತಿವೆ ಎಂದು ವ್ಯಂಗ್ಯ ಮಾಡಿದ್ದು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಪ್ರಶ್ನೆ ಮಾಡುತ್ತಿವೆ. ರಾಮನನ್ನು ವಿರೋಧಿಸುತ್ತವೆ. ಮತ್ತೊಂದು ಕಡೆ ನಮ್ಮ ಸೈನಿಕರ ಶೌರ್ಯವನ್ನು ಪ್ರಶ್ನೆ ಮಾಡುತ್ತವೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಭಜಕ ಮನಸ್ಥಿತಿಯ ಜನರನ್ನು ಪಂಜಾಬ್‍ನಲ್ಲಿ ಆಳಲು ಬಿಡಬೇಡಿ: ಮೋದಿ
Advertisement
ಪಂಜಾಬ್‍ಗೆ ಈಗ ಅಭಿವೃದ್ಧಿಗೆ ಪೂರಕವಾದ ಮತ್ತು ದೇಶಭಕ್ತಿಯ ಸರ್ಕಾರದ ಅವಶ್ಯಕತೆ ಇದೆ. ಹೀಗಾಗಿ ಹೊಸ ಅಭಿವೃದ್ಧಿಯ ಸಂಕಲ್ಪದೊಂದಿಗೆ ಬಿಜೆಪಿ ಬಂದಿದ್ದು, ಮತ ನೀಡುವ ಮೂಲಕ ಬೆಂಬಲಿಸಬೇಕು ಎಂದು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.