ಕೇಜ್ರಿವಾಲ್‍ಗೆ ಖಾಲಿಸ್ತಾನ್ ಉಗ್ರರ ನಂಟು – ತನಿಖೆ ನಡೆಸುತ್ತೇವೆ ಎಂದ ಅಮಿತ್ ಶಾ

Public TV
2 Min Read
kejriwal amith shah

ಚಂಡೀಗಢ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಾಲಿಸ್ತಾನಿ ಪ್ರತ್ಯೇಕ ರಾಷ್ಟ್ರದ ಪ್ರಧಾನಿಯಾಗಬೇಕೆಂದು ಬಯಸಿದ್ದರು ಎಂದು ಮಾಜಿ ಆಪ್ ನಾಯಕ ಕುಮಾರ್ ವಿಶ್ವಾಸ್ ಮಾಡಿದ ಆರೋಪವು ದಿನದಿಂದ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈ ಬಗ್ಗೆ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.

ಈ ಆರೋಪದ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಈ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡು, ಪರಿಶೀಲನೆ ನಡೆಸಿ ತನಿಖೆ ನಡೆಸಲಾಗುವುದು. ಜೊತೆಗೆ ಶೀಘ್ರದಲ್ಲೇ ಕೇಜ್ರಿವಾಲ್ ಅವರನ್ನು ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಪಂಜಾಬ್‍ನ ಮುಖ್ಯಮಂತ್ರಿ ಚನ್ನಿಗೆ ಭರವಸೆ ನೀಡಿದರು.

Charanjit Singh Channi

ರಾಜಕೀಯ ಪಕ್ಷ ಉಗ್ರವಾದಿ ಸಂಘಟನೆಗಳೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವುದು ಹಾಗೂ ಅವುಗಳ ಬೆಂಬಲ ಪಡೆಯುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಅಧಿಕಾರಕ್ಕಾಗಿ ಪ್ರತ್ಯೇಕವಾದಿಗಳೊಡನೆ ಕೈಜೋಡಿಸುವುದು ಖಂಡನೀಯ. ಪಂಜಾಬ್ ರಾಜ್ಯವನ್ನು ವಿಂಗಡನೆ ಮಾಡಲು ಹೋರಟಿರುವುದನ್ನು ವಿರೋಧಿಸುತ್ತೇವೆ. ಇಂತಹ ಸಂಘಟನೆಗಳ ಅಜೆಂಡಾ ರಾಷ್ಟ್ರ ವಿರೋಧಿಗಳ ಅಜೆಂಡಾಗಳಿಗಿಂತ ಭಿನ್ನವಲ್ಲ. ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ನಾನೇ ಸ್ವತಃ ಇದನ್ನು ಪರಿಶೀಲನೆ ನಡೆಸುತ್ತೇನೆ. ದೇಶದ ಏಕತೆ, ಸಮಗ್ರತೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡಲ್ಲ ಎಂದು ತಿಳಿಸಿದರು.

amith shah

ಈ ಹಿಂದೆ ವಿಶ್ವಾಸ್ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಆರೋಪಿ ತನಿಖೆಗೆ ಪಂಜಾಬ್‍ನ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಹಾಗೂ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದರು. ಅಲ್ಲದೆ ಆಪ್‍ಗೆ ಸಿಖ್ಸ್ ಫಾರ್ ಜಸ್ಟಿಸ್ ಎಂಬ ಖಲಿಸ್ತಾನಿ ಸಂಘಟನೆ ಬೆಂಬಲ ವ್ಯಕ್ತಪಡಿಸಿ ಬರದಿರುವ ಪತ್ರವನ್ನು ಗಮನ ಸೆಳೆದಿದ್ದರು. ಇದನ್ನೂ ಓದಿ: ಮೋದಿಯನ್ನು ಹತ್ಯೆ ಮಾಡಲೆಂದೇ ಉಗ್ರರಿಂದ ಆಸ್ಪತ್ರೆಯಲ್ಲಿ ಬಾಂಬ್‌ ಸ್ಫೋಟ!

ARAVINDH KEJIRIWAL

ಈ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಕೇಂದ್ರ ಸರ್ಕಾರವು ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿಗೆ ಪತ್ರ ಬರೆದು ತನಿಖೆಗೆ ಒತ್ತಾಯೊಸಲು ಕೇಳಿಕೊಂಡಿದೆ. ಇನ್ನೆರಡು ದಿನಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು ನನ್ನ ವಿರುದ್ಧ ಎಫ್‍ಐಆರ್‍ನ್ನು ದಾಖಲಿಸುತ್ತದೆ ಎಂದು ಕೇಳಲ್ಪಟ್ಟಿದ್ದೇನೆ. ನನ್ನ ಮೇಲೆ ಬಂದಿರುವ ಎಲ್ಲಾ ಕೇಸ್‍ಗಳನ್ನು ಸ್ವಾಗತಿಸುತ್ತೇನೆ. ಆದರೆ ಕೇಂದ್ರವು ಭದ್ರತೆಯ ಬಗ್ಗೆ ಈ ರೀತಿ ವ್ಯವಹರಿಸುತ್ತಿರುವುದು ನನಗೆ ಸಾಕಷ್ಟು ಚಿಂತೆಯನ್ನು ಉಂಟು ಮಾಡಿದೆ. ಜೊತೆ ರಾಷ್ಟ್ರೀಯ ಭದ್ರತೆಯನ್ನು ಕೇಂದ್ರ ಹಾಸ್ಯ ಮಾಡಿತ್ತಿದೆ. ಎಲ್ಲಾ ಭ್ರಷ್ಟರು ಒಂದಾಗಿದ್ದಾರೆ. ನನ್ನನ್ನು ಹೆದರಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.  ಇದನ್ನೂ ಓದಿ: ಪಂಜಾಬ್‍ನನ್ನು ಕಾಂಗ್ರೆಸ್ ಲೂಟಿ ಮಾಡುತ್ತಿದೆ: ಅರವಿಂದ್ ಕೇಜ್ರಿವಾಲ್

Share This Article
Leave a Comment

Leave a Reply

Your email address will not be published. Required fields are marked *