ಚುನಾವಣೆ ನಂತರ ಪಂಜಾಬ್‌ನಲ್ಲಿ ಕಾಂಗ್ರೆಸ್ ನಿರ್ನಾಮ: ಅಮರಿಂದರ್ ಸಿಂಗ್

Public TV
1 Min Read
Amarinder Singh

ಚಂಡೀಗಢ: ಈ ಬಾರಿಯ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಿಂದ ನಿರ್ನಾಮವಾಗಲಿದೆ ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭವಿಷ್ಯ ನುಡಿದರು.

ಪಟಿಯಾಲಾದಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿಭಿನ್ನ ಜಗತ್ತಿನಲ್ಲಿ ವಾಸಿಸುತ್ತಿದೆ. ಇದರಿಂದಾಗಿ ಈ ಬಾರಿ ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಟೀಕಿಸಿದ ಅವರು, ತಾವು ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

Congress

ಇದೇ ವೇಳೆ ಎಎಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭಗವಂತ್ ಮಾನ್ ದೇಶ ವಿರೋಧಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ತಮ್ಮ ಪಕ್ಷವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ರಾಜ್ಯದಲ್ಲಿ ಸಕಾರಾತ್ಮಕ ವರದಿಗಳು ಬರುತ್ತಿವೆ ಎಂದರು. ಇದನ್ನೂ ಓದಿ:  ಪಂಜಾಬ್ ರಾಜ್ಯವನ್ನು ಇಷ್ಟ ಪಡುವವರು, ಮಾಫಿಯಾ ನಡುವಿನ ಚುನಾವಣೆ ಸ್ಪರ್ಧೆಯಾಗಿದೆ: ಸಿಧು

Amarinder Singh 1

ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಶಿರೋಮಣಿ ಅಕಾಲಿದಳ-ಬಹುಜನ ಸಮಾಜ ಪಕ್ಷ ಮೈತ್ರಿ, ಮತ್ತು ಬಿಜೆಪಿ ಹಾಗೂ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ಮೈತ್ರಿ ಈ ಬಾರಿ ಪ್ರಮುಖ ಪಕ್ಷಗಳಾಗಿ ಸ್ಪರ್ಧಿಸಲಿದೆ. ಇಂದು ಎಲ್ಲಾ 117 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ ಇನ್ನಿಲ್ಲ

Share This Article
Leave a Comment

Leave a Reply

Your email address will not be published. Required fields are marked *