ಚಂಡೀಗಢ: ಉತ್ತರಪ್ರದೇಶ, ಬಿಹಾರದವರನ್ನು ಪಂಜಾಬ್‍ಗೆ ಪ್ರವೇಶಿಸಲು ಬಿಡಬೇಡಿ ಎಂಬ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಹೇಳಿಕೆಗೆ ಬಿಜೆಪಿ ಹಾಗೂ ದೆಹಲಿ ಮುಖ್ಯಮಂತ್ರಿ ಕಿಡಿಕಾರಿದ್ದಾರೆ.
ಉತ್ತರಪ್ರದೇಶ ಮತ್ತು ಬಿಹಾರದ ಜನರನ್ನು ಪಂಜಾಬ್‍ನ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವಮಾನಿಸಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೂ ಚನ್ನಿ ಹೇಳಿಕೆಯನ್ನು ಟೀಕಿಸಿದ್ದಾರೆ. ಯಾವುದೇ ವ್ಯಕ್ತಿ ಅಥವಾ ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಕಾಮೆಂಟ್ ಮಾಡುವುದನ್ನು ಖಂಡಿಸುತ್ತೇನೆ. ಪ್ರಿಯಾಂಕಾ ಗಾಂಧಿ ಕೂಡ ಉತ್ತರ ಪ್ರದೇಶಕ್ಕೆ ಸೇರಿದವರು. ಆದ್ದರಿಂದ ಅವರನ್ನು ಬರಲು ಬಿಡಬಾರದು ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರು ಉತ್ತರಪ್ರದೇಶ, ಬಿಹಾರದ ಜನರನ್ನು ಪಂಜಾಬ್ ಪ್ರವೇಶಿಸಲು ಬಿಡಬೇಡಿ ಎಂದು ಹೇಳಿದ್ದರು. ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ನಗುತ್ತಾ ಚಪ್ಪಾಳೆ ತಟ್ಟಿದ್ದರು. ಇದನ್ನೂ ಓದಿ: NSA ಅಜಿತ್ ದೋವಲ್ ನಿವಾಸಕ್ಕೆ ಅಕ್ರಮ ಪ್ರವೇಶ – ವ್ಯಕ್ತಿ ಬಂಧನ
ಪಂಜಾಬ್‍ನಲ್ಲಿ ಫೆಬ್ರವರಿ 20 ರಂದು 117 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತವಾಗಿ ಚರಣ್‍ಜಿತ್ ಸಿಂಗ್ ಚನ್ನಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚನ್ನಿ ಅವರ ನಾಮನಿರ್ದೇಶನದೊಂದಿಗೆ, ಪಂಜಾಬ್‍ನ ದಲಿತ ಮತದಾರರನ್ನು ಗೆಲ್ಲಲು ಕಾಂಗ್ರೆಸ್ ಯೋಚಿಸುತ್ತಿದೆ. ಪಂಜಾಬ್‍ನ ಜನಸಂಖ್ಯೆಯ ಶೇಕಡಾ 32ಕ್ಕಿಂತ ಹೆಚ್ಚು ದಲಿತರು ಇದ್ದಾರೆ. ಪಂಜಾಬ್‍ನಲ್ಲಿ ದಲಿತ ಸಮುದಾಯದಿಂದ ಚನ್ನಿ ಮೊದಲ ಮುಖ್ಯಮಂತ್ರಿಯಾಗಿದ್ದಾರೆ. ಇದನ್ನೂ ಓದಿ: ತಾಜ್ ಮಹಲ್‌ನಲ್ಲಿ ಹನುಮಾನ್ ಚಾಲೀಸಾ – ಪ್ರತಿಭಟನಕಾರರನ್ನು ತಡೆದ ಪೊಲೀಸರು