ಚಂಡೀಗಢ: ದೆಹಲಿ ನಾಯಕರು ಪಂಜಾಬ್‍ನ್ನು ಲೂಟಿ ಮಾಡಲು ಬಂದಿದ್ದಾರೆ ಎಂದು ಎಎಪಿ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ವಾಗ್ದಾಳಿ ನಡೆಸಿದರು.
ವರ್ಚುವಲ್ ರ‍್ಯಾಲಿಯಲ್ಲಿ ಮಾತನಾಡಿದ ಅವರು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‍ಗೆ ಭೇಟಿ ನೀಡಿದಾಗಲೆಲ್ಲಾ ದುಬಾರಿ ಹೋಟೆಲ್‍ಗಳಲ್ಲಿ ತಂಗಿರುತ್ತಾರೆ. ಅವರು ತಮ್ಮನ್ನು ತಾವು ಸಾಮಾನ್ಯ ವ್ಯಕ್ತಿಗಳೆಂದು ಹೇಗೆ ಕರೆದುಕೊಳ್ಳುತ್ತಾರೆ ಎಂದು ಟೀಕಿಸಿದರು.
ಇತರ ಪಕ್ಷಗಳಿಂದ ಟಿಕೆಟ್ ನಿರಾಕರಿಸಿದ ಕನಿಷ್ಠ 40 ಜನರಿಗೆ ಎಎಪಿ ಟಿಕೆಟ್ ನೀಡಿದೆ. ಅಂಥವರು ಇಲ್ಲಿ ಯಾವ ರೀತಿಯ ಬದಲಾವಣೆಯನ್ನು ತರಲು ಬಯಸುತ್ತಾರೆ ಎಂದು ಪ್ರಶ್ನಿಸಿ, ಅವರು ಪಂಜಾಬ್ ಅನ್ನು ಲೂಟಿ ಮಾಡಲು ಇಲ್ಲಿಗೆ ಬಂದಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ – ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ
ಪಂಜಾಬ್‍ನಲ್ಲಿ ಜಾಹೀರಾತುಗಳಿಗಾಗಿ ಎಎಪಿ 500 ಕೋಟಿ ಖರ್ಚು ಮಾಡಿದೆ. ಈ ಹಣ ಎಲ್ಲಿಂದ ಬಂತು? ಭಗವಂತ್ ಮಾನ್ ಬಳಿ ಅಷ್ಟು ಹಣವಿದೆಯೇ ಎಂದ ಅವರು, ಎಎಪಿ ದೆಹಲಿಯನ್ನು ಲೂಟಿ ಮಾಡಿ ಹಣವನ್ನು ಪಡೆಯುತ್ತಿದ್ದಾರೆ. ಇದೇ ಪರಿಸ್ಥಿತಿ ಪಂಜಾಬ್‍ಗೂ ಬರುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಖಚಿತ: ಅಖಿಲೇಶ್ ಯಾದವ್