ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಭಟನಾ ನಿರತ ರೈತರನ್ನು ಒಮ್ಮೆಯೂ ಭೇಟಿಯಾಗಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಠಾಣ್‍ಕೋಟ್‍ನಲ್ಲಿ ರ್‍ಯಾಲಿ ನಡೆಸಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನಿನ್ನೆ ಚುನಾವಣಾ ಪ್ರಚಾರಕ್ಕಾಗಿ ಪಠಾಣ್‍ಕೋಟ್‍ಗೆ ಬಂದಿದ್ದರು. ಆದರೆ ಒಂದು ವರ್ಷದಿಂದ ಪ್ರತಿಭಟನೆ ಮಾಡಿದ ರೈತರನ್ನು ಭೇಟಿಯಾಗಿಲ್ಲ. ರೈತರನ್ನು ಭೇಟಿ ಮಾಡಲು ತಮ್ಮ ನಿವಾಸದಿಂದ ಕೇವಲ 5-6 ಕಿಮೀ ಪ್ರಯಾಣಿಸಲು ಅವರಿಗೆ ಸಾಧ್ಯವಾಗಲಿಲ್ಲ. ಯುಎಸ್, ಕೆನಡಾಗೆ ಭೇಟಿ ನೀಡುತ್ತಾರೆ. ವಿಶ್ವಾದ್ಯಂತ ಪ್ರವಾಸ ಮಾಡುತ್ತಾರೆ ಮತ್ತು 16,000 ಕೋಟಿ ಮೌಲ್ಯದ ಎರಡು ಹೆಲಿಕಾಪ್ಟರ್‍ಗಳನ್ನು ತಮಗಾಗಿ ಖರೀದಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಬ್ಬು ಬೆಳೆಗಾರರಿಗೆ 14,000 ಕೋಟಿ ರೂ. ಬಾಕಿ ಮೊತ್ತವನ್ನು ಪಾವತಿಸಿಲ್ಲ. ಒಂದು ಬಾರಿಯೂ ಅವರು ಧರಣಿ ನಿರತ ರೈತರನ್ನು ಭೇಟಿಯಾಗಿಲ್ಲ. ಬದಲಿಗೆ ಅವರ ಮಂತ್ರಿಯ ಮಗ ತನ್ನ ವಾಹನದಿಂದ ಆರು ರೈತರನ್ನು ಕೊಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ್ದಾರೆ. ಇದನ್ನೂ ಓದಿ: ಚುನಾವಣೆ ಪ್ರಚಾರದ ವೇಳೆ DMK ಅಭ್ಯರ್ಥಿ ಹೃದಯಾಘಾತದಿಂದ ಸಾವು
ಪಂಜಾಬ್‍ನಲ್ಲಿ ಫೆಬ್ರವರಿ 20 ರಂದು ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಭಾರತೀಯ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಇದನ್ನೂ ಓದಿ: ಮತಕ್ಕಾಗಿ ಕಾಂಗ್ರೆಸ್, ಪಂಜಾಬ್ ಸಿಎಂ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ: ಯೋಗಿ ಆದಿತ್ಯನಾಥ್