ಬೆಂಗಳೂರು: ಪಂಜಾಬ್ ವಿಧಾನಸಭಾ ಚುನಾವಣಾ ಫಲಿತಾಂಶವು ರಾಜಕೀಯ ವಲಯದಲ್ಲಿ ಹೊಸ ದಿಕ್ಕು ತೋರಿಸಿದೆ. ಸುಮಾರು ೭೦ ದಶಕಗಳ ಕಾಲ ಆಡಳಿತ ನಡೆಸಿದ ಎಸ್‌ಎಡಿ-ಬಿಜೆಪಿ, ಕಾಂಗ್ರೆಸ್ ಬಿಟ್ಟು ಜನ ಬದಲಾವಣೆಯನ್ನು ಬಯಸಿದ್ದು, ಎಎಪಿಗೆ ಬೆಂಬಲ ಸೂಚಿಸಿದ್ದಾರೆ. ಪಂಜಾಬ್ ಚುನಾವಣೆ ಫಲಿತಾಂಶವು ಕರ್ನಾಟಕ ರಾಜ್ಯದ ಕಾಂಗ್ರೆಸ್‌ಗೆ ಪಾಠವಾಗುತ್ತಾ ಎಂಬ ಚರ್ಚೆ ಹುಟ್ಟುಕೊಂಡಿದೆ.
ರಾಜ್ಯ ಕಾಂಗ್ರೆಸ್ ಸ್ಥಿತಿಗೂ ಪಂಜಾಬ್ ರಾಜ್ಯ ಕಾಂಗ್ರೆಸ್ ಸ್ಥಿತಿಗೂ ಹೋಲಿಕೆ ಇದೆ. ಅಲ್ಲಿ ಚರಣ್‌ಜಿತ್ ಸಿಂಗ್ ಚನ್ನಿ ವರ್ಸಸ್ ನವಜೋತ್ ಸಿಂಗ್ ನಡುವೆ ಫೈಟ್ ಇದ್ದಂತೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ವರ್ಸಸ್ ಡಿ.ಕೆ.ಶಿವಕುಮಾರ್ ಫೈಟ್ ಇದೆ. ಪಂಜಾಬ್ ಫಲಿತಾಂಶ ರಾಜ್ಯ ಕಾಂಗ್ರೆಸ್ ಪಾಲಿಗೂ ಎಚ್ಚರಿಕೆಯ ಗಂಟೆ ಆಗುವ ಸಾಧ್ಯತೆಯಿದೆ. ಇದನ್ನೂ ಓದಿ: ಆಪ್‍ಗೆ ಅಭಿನಂದನೆ ಕೋರಿದ ನವಜೋತ್ ಸಿಂಗ್ ಸಿಧು
ಒಗ್ಗಟ್ಟಿನಿಂದ ಹೋದರಷ್ಟೆ ಅನಕೂಲಕರ ಎಂಬ ಸಂದೇಶ ರವಾನೆಯಾಗಿದೆ. ಪರಸ್ಪರ ಕಚ್ಚಾಡಿಕೊಂಡಿರೆ ಪಂಜಾಬ್ ರೀತಿಯೇ ಆಗುವ ಎಚ್ಚರಿಕೆ ನೀಡಿದೆ. ಇದರಿಂದ ಬಣ ರಾಜಕಾರಣಕ್ಕೆ ಬ್ರೇಕ್ ಹಾಕಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಟಿಕೆಟ್ ಹಂಚಿಕೆ ಸೇರಿದಂತೆ ಎಲ್ಲಾ ಹಂತದಲ್ಲೂ ಏಕ ಅಭಿಪ್ರಾಯ ಮೂಡಿಸಬೇಕಾದ ಅನಿವಾರ್ಯತೆ ಇದೆ. ಪಕ್ಷ ಸಂಘಟನೆಗೂ ಸಿದ್ದರಾಮಯ್ಯ, ಡಿಕೆಶಿ ಜೊತೆ ಜೊತೆಯಾಗಿಯೇ ಓಡಾಡಬೇಕಾದ ಅನಿವಾರ್ಯತೆ ಇದೆ. ಯಾವುದೇ ಸಂದರ್ಭದಲ್ಲೂ ಒಂದೇ ರೀತಿಯ ಹೇಳಿಕೆ ಕೊಡಲೇಬೇಕು ಎನ್ನುವಂತಾಗಿದೆ. ಇದನ್ನೂ ಓದಿ: ಪಂಜಾಬ್‌ನಲ್ಲಿ AAP ಗೆದ್ದಿದ್ದು ಹೇಗೆ?
ಇಬ್ಬರು ಸಹ ಸ್ವಪ್ರತಿಷ್ಠೆ ಬಿಟ್ಟು ಒಂದಾಗಲೇಬೇಕಾದ ಅನಿವಾರ್ಯತೆ ಇದೆ. ಪಕ್ಷದ ಇತರೆ ನಾಯಕರನ್ನು ಇಬ್ಬರೂ ವಿಶ್ವಾಸಕ್ಕೆ ತಗೆದುಕೊಳ್ಳಬೇಕಿದೆ. ಹಿರಿಯರ ಬಣವನ್ನು ಮನವೊಲಿಸಿ ವಿಶ್ವಾಸಕ್ಕೆ ತಗೆದುಕೊಳ್ಳಲೇಬೇಕು ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಎಎಪಿ ಮುನ್ನಡೆ – ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮಾಚರಣೆ ಶುರು