ಚಂಡೀಗಢ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸಿಧು ಅವರು ಹೀನಾಯ ಸೋಲನುಭವಿಸಿದ್ದಾರೆ.
ಪಾಟಿಯಾಲ ನಗರ ಕ್ಷೇತ್ರದಲ್ಲಿ ಅಮರೀಂದರ್ ಸಿಂಗ್ ಸ್ಪರ್ಧಿಸಿದ್ದರು. ಸಿಂಗ್ ವಿರುದ್ಧ ಆಮ್ ಆದ್ಮಿ ಪಕ್ಷದ ಅಜಿತ್ ಪಾಲ್ ಸಿಂಗ್ ಕೊಹ್ಲಿ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಪಂಜಾಬ್ ಫಲಿತಾಂಶ: 3ನೇ ಸ್ಥಾನಕ್ಕೆ ಕುಸಿದ ಸಿಧು
2017ರ ಚುನಾವಣೆಯಲ್ಲಿ ಸಿಂಗ್ ಅವರ ಗೆಲುವಿನ ಅಂತರವು ಶೇ.49 ರಷ್ಟಿತ್ತು. ಆದರೆ ಈ ಬಾರಿ ಎಎಪಿ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ.
ಅಮರೀಂದರ್ ಸಿಂಗ್ ಆಡಳಿತ ವಿರೋಧಿ ಅಲೆ ಪಕ್ಷದೊಳಗಡೇ ಎದ್ದಿತ್ತು. ಆಂತರಿಕ ಕಲಹದಿಂದಾಗಿ ಸಿಂಗ್ ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ನಂತರ ಅಮರೀಂದರ್ ಸಿಂಗ್ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇದನ್ನೂ ಓದಿ: ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ