ನವದೆಹಲಿ: ಪಂಜಾಬ್‍ನ ಕ್ಯಾಬಿನೆಟ್ ಸಚಿವ ನವಜೋತ್ ಸಿಂಗ್ ಸಿಧು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮುಖಂಡೆ ಪ್ರಿಯಾಂಕ ಗಾಂಧಿ ಅವರನ್ನು ಭೇಟಿಯಾಗಿ ಪಂಜಾಬ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ದೆಹಲಿಗೆ ಶುಕ್ರವಾರವೇ ಬಂದಿರುವ ನವಜೋತ್ ಸಿಂಗ್ ಸಿಧು ಅವರು ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ. ಕೇರಳ ಪ್ರವಾಸ ಮುಗಿಸಿಕೊಂಡು ದೆಹಲಿಗೆ ಮರಳಿದ ರಾಹುಲ್ ಗಾಂಧಿ ಅವರನ್ನು ಇಂದು ಭೇಟಿಯಾಗಿದ್ದಾರೆ. ಈ ಸಂಬಂಧ ಟ್ವೀಟ್ ಕೂಡ ಮಾಡಿದ್ದಾರೆ.
Advertisement
Met the congress President, handed him my letter, appraised him of the situation ! pic.twitter.com/ZcLW0rr8r3
— Navjot Singh Sidhu (@sherryontopp) June 10, 2019
Advertisement
ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ ಪತ್ರವೊಂದನ್ನು ನೀಡಿರುವೆ. ಈ ಮೂಲಕ ಪರಿಸ್ಥಿತಿಯನ್ನು ತಿಳಿಸಿರುವೆ ಎಂದು ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಹಾಗೂ ಪಕ್ಷದ ಮುಖಂಡ ಅಹ್ಮದ್ ಪಟೇಲ್ ಅವರೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
Advertisement
ಲೋಕಸಭಾ ಚುನಾವಣೆಯ ಸಂದರ್ಭದಿಂದಲೂ ಪಂಜಾಬ್ ಸಿಎಂ, ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ನವಜೋತ್ ಸಿಂಗ್ ಸಿಧು ಕಿಡಿಕಾರುತ್ತಾ ಬಂದಿದ್ದರು. ಈ ಇಬ್ಬರು ನಾಯಕ ನಡುನೆ ಶೀತಲ ಸಮರ ಮುಂದುವರಿದಿದೆ. ಇದರಿಂದಾಗಿ ಅಮರಿಂದರ್ ಸಿಂಗ್ ಅವರು, ಸಚಿವ ನವಜೋತ್ ಸಿಂಗ್ ಸಿಧು ಬಳಿಯಿದ್ದ ಪ್ರಮುಖ ಖಾತೆಯನ್ನು ಕಿತ್ತುಕೊಂಡು ಇಂಧನ ಖಾತೆ ನೀಡಿದ್ದಾರೆ. ಇದು ಈಗ ನವಜೋತ್ ಸಿಂಗ್ ಸಿಧು ಅವರ ಆಕ್ರೋಶಕ್ಕೆ ಕಾರಣವಾಗಿದೆ.