ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವತ್ ಮಾನ್ (Punjab Chief Minister Bhagwant Mann) ಅವರು ಶನಿವಾರ ರಾತ್ರಿ ಗುಜರಾತ್‍ನಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ (Navratri festivities) ಪಾಲ್ಗೊಂಡರು. ಈ ವೇಳೆ ಯಾವುದೇ ಪೂರ್ವಸಿದ್ಧತೆಯಿಲ್ಲದೇ ಗಾರ್ಬಾ ಟ್ಯೂನ್‍ಗೆ (Garba tune) ನೃತ್ಯ ಮಾಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
CM @BhagwantMann tried some hand on garba at Rajkot. Confluence of Gujarati and Punjabi culture, mixture of Garba and Bhangda! ???????? pic.twitter.com/TGb3ibWjNj
— Dr Safin ???????? (@HasanSafin) October 1, 2022
Advertisement
ರಾಜ್‍ಕೋಟ್‍ನಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಪ್ರೇಕ್ಷಕರು ಭಗವತ್ ಮಾನ್ ಅವರನ್ನು ಹುರಿದುಂಬಿಸುವುದರೊಂದಿಗೆ ಕೆಲವು ಭಾಂಗ್ರಾ ಸ್ಟೆಪ್ಸ್ (Bhangra moves) ಹಾಕುವಂತೆ ಒತ್ತಾಯಿಸಿದರು. ಹೀಗಾಗಿ ಪ್ರೇಕ್ಷರನ್ನು ಸಂತೋಷ ಪಡಿಸಲು ಭಗವಂತ್ ಮಾನ್ ಅವರು ನೃತ್ಯ ಮಾಡಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಸುವರ್ಣಸೌಧದಲ್ಲಿ ಈ ವರ್ಷ ಚೆನ್ನಮ್ಮ, ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ- ಬೊಮ್ಮಾಯಿ
Advertisement
आज वडोदरा में दिन की समाप्ति पे गरबा कार्यक्रम में हिस्सा लिया और मां अंबा से सबकी खुशहाली और अच्छे स्वास्थ्य की कामना की। pic.twitter.com/ubFxpm5teA
— Raghav Chadha (@raghav_chadha) October 1, 2022
Advertisement
ವರ್ಷಕ್ಕೊಮ್ಮೆ ಬರುವ ಹಿಂದೂ ಹಬ್ಬಗಳಲ್ಲಿ ನವರಾತ್ರಿ ಕೂಡ ದೊಡ್ಡ ಹಬ್ಬವಾಗಿದ್ದು, ಇದರಲ್ಲಿ ಒಂಬತ್ತು ರಾತ್ರಿ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ. ಗುಜರಾತ್‍ನ ಫೇಮಸ್ ನೃತ್ಯವನ್ನು ಈ ಸಮಯದಲ್ಲಿ ಆಡುತ್ತಾರೆ. ನವರಾತ್ರಿಯು ವಾರ್ಷಿಕ ಹಿಂದೂ ಹಬ್ಬವಾಗಿದ್ದು, ಇದರಲ್ಲಿ ಒಂಬತ್ತು ರಾತ್ರಿ ದುರ್ಗಾದೇವಿಯನ್ನು ಪೂಜಿಸಲಾಗುತ್ತದೆ, ಗರ್ಬಾ ಗುಜರಾತ್‍ನ ಸಿಗ್ನೇಚರ್ ನೃತ್ಯ ಪ್ರಕಾರವಾಗಿದೆ, ಭಾಂಗ್ರಾಗೂ ಪಂಜಾಬ್‍ಗೂ ವಿಶಿಷ್ಟವಾದ ಸಂಬಂಧವಿದೆ.
Advertisement
ಇತ್ತೀಚೆಗಷ್ಟೇ ವಡೋದರದಲ್ಲಿ ನಡೆದ ಮತ್ತೊಂದು ಸಾರ್ವಜನಿಕ ಸಮಾರಂಭದಲ್ಲಿ ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ (Raghav Chadha) ಗರ್ಬಾ ನೃತ್ಯ ಮಾಡಿ ಪ್ರೇಕ್ಷಕರೊಂದಿಗೆ ಕುಪ್ಪಳಿಸಿದ್ದರು. ಈ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ: ರಾಹುಲ್, ಸೋನಿಯಾ ಗಾಂಧಿ ಅವರ ತ್ಯಾಗ ಬಹಳಷ್ಟಿದೆ: ಮಲ್ಲಿಕಾರ್ಜುನ ಖರ್ಗೆ